HEALTH TIPS

ಮಹಿಳೆಗೆ ಕಿರುಕುಳ-ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ವೈದ್ಯ: ವರದಿ ಕೇಳಿದ ಹೈಕೋರ್ಟು

ಕಾಸರಗೋಡು: ಮೂತ್ರಕೋಶ ಸಂಬಂಧಿ ಕಾಯಿಲೆಗಾಗಿ ಚಿಕಿತ್ಸೆಗೆ ಅಗಮಿಸಿದ ಮಹಿಳೆಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟು ಅಂಬಲತ್ತರ ಠಾಣೆ ಪೊಲೀಸರಿಂದ ವರದಿ ಕೇಳಿದೆ. ಆರೋಪಿ ವೈದ್ಯ ಡಾ. ಜಾನ್ ಎಸ್ ಜಾನ್ ಹೈಕೋರ್ಟಿನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವರದಿ ಕೇಳಿದೆ.

ಅಂಬಲತ್ತರ ಇರಿಯದಲ್ಲಿ ಕ್ಲಿನಿಕ್ ನಡೆಸುತ್ತಿರುವ ವೈದ್ಯನ ಬಳಿ ಎರಡು ಮಕ್ಕಳ ತಾಯಿಯಾಗಿರುವ ಗೃಹಿಣಿ ಚಿಕಿತ್ಸೆಗೆ ಆಗಮಿಸಿದ್ದರು. ಈ  ಸಂದರ್ಭ ತನಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಹಿಳೆ ನೀಡಿದ ದೂರಿನನ್ವಯ ವೈದ್ಯನ ವಿರುದ್ಧ ಕೇಸು ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶ ಪ್ರಕರ ಅಂಬಲತ್ತರ ಠಾಣೆ ಪೊಲೀಸರು ಕೇಸು ದಕಲಿಸುತ್ತಿದ್ದಂತೆ ವೈದ್ಯ ತಲೆಮರೆಸಿಕೊಂಡಿದ್ದನು. ಈ ಮಧ್ಯೆ ವೈದ್ಯ ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾನೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries