ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವದ 4ನೇ ದಿನ ಸಂಜೆ 5.30ಕ್ಕೆ ತುಳುನಾಡ ಸಂಗಮ ಸಭಾ ಕಾರ್ಯಕ್ರಮ ಜರಗಲಿದೆ. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಕೊಂಡೆವೂರು ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ಮುಂಬೈ ಹೇರಂಭಾ ಇಂಡಸ್ಟ್ರೀಸ್ ಚೇರ್‍ಮೇನ್ ಕುಳೂರು ಸದಾಶಿವ ಶೆಟ್ಟಿ ಕನ್ಯಾನ ಇವರು ಉದ್ಘಾಟಿಸಲಿದ್ದಾರೆ. ಬ್ರಹ್ಮಶ್ರೀ ಕಮಲಾದೇವಿ ಆಸ್ರಣ್ಣ ಶ್ರೀ ಕ್ಷೇತ್ರ ಕಟೀಲು ಇವರು ಅಧ್ಯಕ್ಷತೆ ವಹಿಸುವರು. ದೈವಚಿಂತಕ ಡಾ. ರವೀಶ ಪರವ ಪಡುಮಲೆ ಧಾರ್ಮಿಕ ಭಾಷಣ ಮಾಡಲಿದ್ದಾರೆ. ನಾಡಿನ ವಿವಿಧ ವಿಭಾಗಗಳ ಗಣ್ಯರು ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
(ಚಿತ್ರ: ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ನೇತೃತ್ವದಲ್ಲಿ ಸೋಮವಾರ ನಡೆದ ಆಗಮನ ಶಾಸ್ತ್ರಾತ್ವಿತ ವೈದಿಕ ಕಾರ್ಯಕ್ರಮ.)
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಗ್ಗೆ ಗಣಪತಿ ಹೋಮ, ತತ್ವಕಲಶ ಪೂಜೆ, ತತ್ವ ಹೋಮ, ಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ರಾತ್ರಿ ಅನುಜ್ಞಾಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಅಂಕುರ ಪೂಜೆ, ತ್ರಿಕಾಲ ಪೂಜೆ, ಬಿಂಬ ಶುದ್ಧಿ, ಕಲಶಪೂಜೆ, ಮಹಾಪೂಜೆ ನಡೆಯಲಿದೆ. ಬೆಳಗ್ಗೆ 10 ರಿಂದ ಪ್ರತಿಭಾ ಕೃಷ್ಣಮೂರ್ತಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 11.30ರಿಂದ ಪುದುಕೋಳಿ ಮತ್ತು ಡಾ. ಹೇಮಶ್ರೀ ಹಾಗೂ ಶ್ರೀವಾಣಿ ಕಾಕುಂಜೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಮಧ್ಯಾಹ್ನ 1.30ರಿಂದ ಶಾಂತಾ ಕುಂಟನಿ ನೇತೃತ್ವದ ಸತ್ಯಶಾಂತಾ ಪ್ರತಿಷ್ಠಾನ ಪುತ್ತೂರು ಇವರಿಂದ ಸಂಗೀತ ನೃತ್ಯ ವೈಭವ, ರಾತ್ರಿ 8 ಕ್ಕೆ ಸಾಮ್ರಾಟ್ ಮಾನ್ಯ ಪ್ರಾಯೋಜಕತ್ವದಲ್ಲಿ ತುಳು ಸಾಮಾಜಿಕ ನಾಟಕ, ಲ| ಕಿಶೋರ್ ಡಿಶೆಟ್ಟಿ ನಿರ್ದೇಶನದಲ್ಲಿ ಲಕುಮಿ ತಂಡ ಮಂಗಳೂರು ಇವರಿಂದ `ಒರಿಯೆ ಆಂಡಲಾ ಸರಿಬೋಡು' ಪ್ರದರ್ಶನಗೊಳ್ಳಲಿದೆ.





