ತಿರುವನಂತಪುರಂ: ಹೈಯರ್ ಸೆಕೆಂಡರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿನ ಕಾಗುಣಿತ ತಪ್ಪುಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ನಿರ್ದೇಶನ ನೀಡಿದ್ದಾರೆ. ಈ ನಿರ್ದೇಶನವನ್ನು ಸಾಮಾನ್ಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನೀಡಲಾಗಿದೆ.
ಯಾವ ಹಂತದಲ್ಲಿ ನಿರ್ಲಕ್ಷ್ಯ ನಡೆದಿದೆ ಎಂಬುದನ್ನು ಪತ್ತೆಮಾಡಲು ವರದಿ ಸಲ್ಲಿಸುವಂತೆ ಸಚಿವ ವಿ. ಶಿವನ್‌ಕುಟ್ಟಿ ತುರ್ತು ಸೂಚನೆ ನೀಡಿರುವರು. ಪ್ರಶ್ನೆಪತ್ರಿಕೆ ತಯಾರಿಕೆಯ ಯಾವ ಹಂತದಲ್ಲಿ ನಿರ್ಲಕ್ಷ್ಯ ಉಂಟಾಗಿದೆ ಎಂಬುದನ್ನು ಪತ್ತೆ ಮಾಡಲು ಸುಹಚಿಸಲಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳ ಮೇಲೆ ಕಾಗುಣಿತ ದೋಷಗಳು ಪ್ರತಿಕೂಲ ಪರಿಣಾಮ ಬೀರಿದ್ದರೆ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದುಸಚಿವರು ತಿಳಿಸಿರುವರು.
ಹೈಯರ್ ಸೆಕೆಂಡರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಮಲಯಾಳಂ ಭಾಷಾಂತರದಲ್ಲಿ ವ್ಯಾಪಕವಾದ ಮುದ್ರಣದೋಷಗಳ ವಿರುದ್ಧ ದೂರುಗಳು ಬಂದಿದ್ದವು.




