ಕಾಸರಗೋಡು : ಕನ್ನಡ-ಮಲಯಾಳ ಭಾಷಾಂತರ ಕಾರ್ಯಾಗಾರ ಮಾ. 9ರಂದು ನುಳ್ಳಿಪ್ಪಾಡಿ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯಲಿದೆ. ಬೆಳಗ್ಗೆ 10ಕ್ಕೆ ಕನ್ನಡದ ಖ್ಯಾತ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಉದ್ಘಾಟಿಸುವರು. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷ ಡಾ. ಎಸ್.ಸುಷ್ಮಾ ಶಂಕರ್ ಅಧ್ಯಕ್ಷ ತೆ ವಹಿಸುವರು.
ಡಾ. ರತ್ನಾಕರ ಮಲ್ಲಮೂಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಬಾರಿಯ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೆ.ವಿ.ಕುಮಾರನ್ ಮಾಸ್ಟರ್, ಡಿ.ಬಿ.ಟಿ.ಎ. ಉಪಾಧ್ಯಕ್ಷ ಡಾ.ಬಿ.ಎಸ್.ಶಿವಕುಮಾರ್ ತರಗತಿ ನಡೆಸುವರು.

