ತಿರುವನಂತಪುರಂ: ಕಾಸರಗೋಡಿನ ವ್ಯಕ್ತಿಯೊಬ್ಬರು ಬಿಸಿಲಿನ ಆಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಕಯ್ಯೂರು ವಲಿಯ ಪೊಯಿಲ್‍ನ ಕುಂಞÂ್ಞ ಕಣ್ಣನ್ (92) ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ 2:30 ಕ್ಕೆ ಅವರ ಮನೆಯ ಬಳಿ ಬಿಸಿಲಿನ ಬೇಗೆಗೆ ತುತ್ತಾಗಿ ಮೃತರಾದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ದೇಹದ ಚರ್ಮ ಸುಟ್ಟು ಹೋಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಹೆಚ್ಚಿನ ಜಿಲ್ಲೆಗಳಲ್ಲಿ ತಾಪಮಾನವು ಸರಾಸರಿಗಿಂತ ನಾಲ್ಕರಿಂದ ಐದು ಡಿಗ್ರಿ ಹೆಚ್ಚಾಗಿದೆ. ದಿನದ ಅತ್ಯಂತ ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದು ಮತ್ತು ಕೆಲಸ ಮಾಡುವುದರ ಮೇಲೆ ನಿರ್ಬಂಧಗಳಿವೆ.


