HEALTH TIPS

ಕೃತಕ ಬುದ್ಧಿಮತ್ತೆ ಮೇಲಿನ ಅತಿಯಾದ ಅವಲಂಬನೆಯಿಂದ ಸೃಜನಶೀಲತೆಗೆ ಧಕ್ಕೆ-ಡಾ. ಎಸ್. ಉಣ್ಣಿಕೃಷ್ಣನ್ ನಾಯರ್

ಕಾಸರಗೋಡು: ಕೃತಕ ಬುದ್ಧಿಮತ್ತೆಯ ಮೇಲಿನ ಅತಿಯಾದ ಅವಲಂಬನೆ ನಮ್ಮಲ್ಲಿನ ಸೃಜನಶೀಲತೆಯನ್ನು ನಾಶಪಡಿಸುವುದಾಗಿ ತಿರುವನಂತಪುರಂ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಎಸ್. ಉಣ್ಣಿಕೃಷ್ಣನ್ ನಾಯರ್ ತಿಳಿಸಿದ್ದಾರೆ.

ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ವಿಶೇಷವಾಗಿ ಸಿದ್ಧಪಡಿಸಿದ ವೇದಿಕೆಯಲ್ಲಿ 8ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪದವಿಪ್ರದಾನ ನಡೆಸಿ ಮಾತನಾಡಿದರು. 


ನಮ್ಮೊಳಗಿನ ಸೃಜನಶೀಲತೆ ನಮ್ಮನ್ನು ದೊಡ್ಡ ಕೆಲಸಗಳನ್ನು ನಡೆಸಲು ಪ್ರೇರಣೆ ನೀಡುತ್ತದೆ.  ವರ್ಗ, ತರಗತಿ ಮತ್ತು ಶಿಕ್ಷಕರಿಂದ ಪಡೆದ ಜ್ಞಾನವನ್ನು ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ನಾವು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಲ್ಳುತ್ತೇವೆ ಎಂಬುದು ಮುಖ್ಯವಾಗಬೇಕು.  ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವುದೂ ಇಂದಿನ ಅನಿವಾರ್ಯತೆಗಳಲ್ಲಿ ಒಂದಗಿದೆ. ಯುವ ಸಮೂಹ ಭಾರತದ ಮುಂದಿರುವ ಪ್ರಬಲ ಶಕ್ತಿಯಾಗಿದ್ದು, ಇದರಿಂದ ಅಭಿವೃದ್ಧಿ ಹೊಂದಿದ ದೇಶವಾಗುವ ಕನಸು ನನಸಾಗಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಪ್ರಭಾರ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ, ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್ ನಂಬಿಯಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಆರ್. ಜಯಪ್ರಕಾಶ್, ವಿಶ್ವವಿದ್ಯಾಲಯದ ಕೋರ್ಟ್ ದಸ್ಯರು, ಕಾರ್ಯಕಾರಿ ಮಂಡಳಿ ಸದಸ್ಯರು, ಶೈಕ್ಷಣಿಕ ಕೌನ್ಸಿಲ್ ಸದಸ್ಯರು, ಹಣಕಾಸು ಸಮಿತಿ ಸದಸ್ಯರು, ಡೀನ್‍ಗಳು, ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಪೆÇೀಷಕರು ಪಾಲ್ಗೊಂಡಿದ್ದರು. 

1500 ಜನರು ಭಾಗವಹಿಸಿದ ಸಮಾರಂಭದಲ್ಲಿ 2024 ರಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ 851 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.  ನೇರವಾಗಿ ಭಾಗವಹಿಸಲು 664 ಮಂದಿ ನೋಂದಣಿ ಮಾಡಿಕೊಂಡಿದ್ದು, 41 ಜನರಿಗೆ ಪದವಿ, 727 ಸ್ನಾತಕೋತ್ತರ ಪದವಿ, 58 ಪಿಎಚ್‍ಡಿ ಪದವಿ ಮತ್ತು 25 ಪಿಜಿ ಡಿಪೆÇ್ಲಮಾ ಪದವಿಗಳನ್ನು ನೀಡಲಾಯಿತು. ಅಧ್ಯಯನದ ವಿವಿಧ ವಿಭಾಗಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಎಲ್ಫಾ ನಶೀದಾ (ಭಾಷಾಶಾಸ್ತ್ರ), ಅಶ್ವತಿ ಎಪಿ. (ಗಣಿತ), ಅಂಜನಾ ಪಿಎಸ್ (ಮ್ಯಾನೇಜ್‍ಮೆಂಟ್ ಸ್ಟಡೀಸ್), ಅನಿಲ ವಿ (ವಾಣಿಜ್ಯ ಮತ್ತು ಅಂತರರಾಷ್ಟ್ರೀಯ ವ್ಯಾಪಾರ), ಸಾದಿ ಅನುಗ್ನಾ ರಾವ್ (ಸಾರ್ವಜನಿಕ ಆಡಳಿತ ಮತ್ತು ನೀತಿಅಧ್ಯಯನಗಳು) ಗೌರವವನ್ನು ಪಡೆದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries