ಅಬುಧಾಬಿ: ಯುಎಇ ಇಬ್ಬರು ಕೇರಳೀಯರಿಗೆ ಮರಣದಂಡನೆ ವಿಧಿಸಿದೆ. ಮೊಹಮ್ಮದ್ ರಿನಾಶ್ ಮತ್ತು ಮುರಳೀಧರನ್ ಪೆರುಮ್ತಟ್ಟ ವಳಪ್ಪಿಲ್ ಅವರಿಗೆ ವಧೆ ಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಈ ಬಗ್ಗೆ ಯುಎಇ ಫೆಬ್ರವರಿ 28 ರಂದು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು.
ಎಮಿರಾಟಿ ಪ್ರಜೆಯ ಕೊಲೆಗಾಗಿ ಮೊಹಮ್ಮದ್ ರಿನಾಶ್‍ಗೆ ಮರಣದಂಡನೆ ವಿಧಿಸಲಾಯಿತು. ಭಾರತೀಯ ನಾಗರಿಕನ ಕೊಲೆಗಾಗಿ ಮುರಳೀಧರನ್‍ಗೆ ಮರಣದಂಡನೆ ವಿಧಿಸಲಾಯಿತು. ಯುಎಇ ಸರ್ಕಾರಕ್ಕೆ ಕ್ಷಮಾದಾನ ಅರ್ಜಿಗಳನ್ನು ಕಳುಹಿಸುವುದು ಸೇರಿದಂತೆ ಎಲ್ಲಾ ಸಂಭಾವ್ಯ ಕಾನ್ಸುಲರ್ ಮತ್ತು ಕಾನೂನು ಸಹಾಯವನ್ನು ರಾಯಭಾರ ಕಚೇರಿ ಒದಗಿಸಿತ್ತು, ಆದರೆ ಯುಎಇಯ ಅತ್ಯುನ್ನತ ನ್ಯಾಯಾಲಯವಾದ ಕ್ಯಾಸೇಶನ್ ನ್ಯಾಯಾಲಯವು ಅವರ ಶಿಕ್ಷೆಯನ್ನು ಎತ್ತಿಹಿಡಿಯಿತು.
ಇಬ್ಬರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ ಮತ್ತು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.






