ಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಮ್ಮ ಮಹಾಲಿಂಗೇಶ್ವರ ಕ್ಷೇತ್ರದ ವಾರ್ಷಿಕೋತ್ಸವ ಮಾ.14 ಶುಕ್ರವಾರದಂದು ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಕಾರ್ಮಿಕತ್ವದಲ್ಲಿ ಗಣಪತಿ ಹೋಮ, ಕಾವೇರಿ ತೀರ್ಥದಲ್ಲಿ ಕುಂಕುಮಾರ್ಚನೆ, ನಾಗಬಿಂಬಕ್ಕೆ ಕ್ಷೀರಾಭಿಷೇಕ, ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ ಹಾಗೂ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಹಾಗೂ ಅದೇ ದಿನ ಸೂರ್ಯಸ್ತಮಾನದ ಬಳಿಕ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ರಂಗಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ನಡೆಯಲಿದೆ.
ಇದರಂಗವಾಗಿ ಅಂದು ಬೆಳಗ್ಗೆ 10 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ವಸಂತ ಪೈ ಬದಿಯಡ್ಕ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಅಣ್ಣಪ್ಪ ಕ್ಷೇತ್ರ ಐತನಡ್ಕದ ಆಡಳಿತ ಮೊಕ್ತೇಸರ ವಕೀಲ. ಸಂಕಪ್ಪ ಪೂಜಾರಿ, ಸಮಾಜ ಸೇವಕ ವಕೀಲ. ರಾಮಪ್ರಸಾದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮುಕೇಶ್, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಧುಸೂದನ ಆಯರ್, ಕ್ಷೇತ್ರದ ಕಾರ್ಯಾಧ್ಯಕ್ಷ ದಾಮೋದರ ಮಣಿಯಾಣಿ, ರಾಘವ ಎಂ ಎನ್, ವಕೀಲ ಶಿವರಾಮ ಎಂ.ಎನ್, ನಾರಾಯಣ ಕೇಕಡ್ಕ, ಚಂದ್ರಶೇಖರ ಎಂ.ಎನ್, ರಾಮಚಂದ್ರ ಎನ್, ಮನೋಜ್ ಎಂ ಸಿ, ಸದಾನಂದ, ಜಯಕರ ಎಂ, ಸೇವಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿರುವರು.




