ಕೊಚ್ಚಿ: ಮುಂಡಕೈ-ಚುರಲ್ಮಲಾ ಪುನರ್ವಸತಿಗಾಗಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಎಲ್ಸ್ಟನ್ ಎಸ್ಟೇಟ್ ಭಾರಿ ಮೊತ್ತದ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದೆ.
ಎಲ್ಸ್ಟನ್ ಎಸ್ಟೇಟ್ ಮಾಲೀಕರು 549 ಕೋಟಿ ರೂಪಾಯಿ ಪರಿಹಾರ ಕೇಳುತ್ತಿದ್ದಾರೆ. ಸರ್ಕಾರ ನಿರ್ಧರಿಸಿದ 26 ಕೋಟಿ ರೂ.ಗಳು ಸಾಕಾಗುವುದಿಲ್ಲ ಎಂದು ಎಲ್ಸ್ಟನ್ ಎಸ್ಟೇಟ್ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.
78.19 ಹೆಕ್ಟೇರ್ ಭೂಮಿಯ ಅಂದಾಜು ಬೆಲೆ ರೂ. 519.61 ಕೋಟಿ. 64 ಹೆಕ್ಟೇರ್ ಭೂಮಿಗೆ ಸರ್ಕಾರ ಕೇವಲ 20 ಕೋಟಿ ರೂ. ಎಂದು ಅಂದಾಜಿಸಿದೆ. ಇದು ಮಾರುಕಟ್ಟೆ ಬೆಲೆಯ ಕೇವಲ ಶೇ. 5 ರಷ್ಟು ಮಾತ್ರ.
ಪರಿಹಾರವು ಭೂಮಿಯ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಎಲ್ಸ್ಟನ್ ಎಸ್ಟೇಟ್‍ನ ಅರ್ಜಿಯನ್ನು ಹೈಕೋರ್ಟ್ ಇಂದು(ಗುರುವಾರ) ವಿಚಾರಣೆ ನಡೆಸಲಿದೆ.





