ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಎ.ಯು.ಪಿ ಶಾಲೆಯಲ್ಲಿ 31 ವರ್ಷ ಸುದೀರ್ಘ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈ ಶೈಕ್ಷಣಿಕ ವರ್ಷ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಪದ್ಮಾವತಿ ಟೀಚರ್ ಇವರಿಗೆ ಶಾಲೆಯ ವತಿಯಿಂದ ವಿದಾಯಕೂಟ ಕಾರ್ಯಕ್ರಮ ಶಾಲಾ ಯಂ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಸೋಮವಾರ ಜರಗಿತು.. ಉಪ್ಪಳ ಜಿ ಎಚ್ ಎಸ್ ಎಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಟೀಚರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅಭಿನಂದನಾ ಭಾಷಣ ಗೈದರು. ಶಾಲಾ ಆಡಳಿತ ಸಲಹೆಗಾರ ಶ್ರೀಧರ್ ರಾವ್ ಆರ್.ಎಂ, ಅಧ್ಯಾಪಕರಾದ ಹೇಮಮಾಲಿನಿ ಎಂ ಎಚ್, ಬಾಲಕೃಷ್ಣ.ಎಂ, ಸೌಮ್ಯ.ಎನ್, ಮಹಾಬಲೇಶ್ವರ ಭಟ್ ಹಾಗೂ ಶುಭ.ಪಿ ಶುಭ ಹಾರೈಸಿದರು.
ಶಾಲಾ ವತಿಯಿಂದ ನಿವೃತ್ತರನ್ನು ಗಣ್ಯರ ಸಮಕ್ಷಮದಲ್ಲಿ ಗೌರವಿಸಲಾಯಿತು.ನಿವೃತ್ತರ ಪರಿಚಯವನ್ನು ಶಾಲಾ ಅಧ್ಯಾಪಕ ಹರೀಶ್ ಸುಲಾಯ ವಾಚಿಸಿದರು.ನಿವೃತ್ತರು ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡರು. ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್, ಪಿ ಟಿ ಎ ಅಧ್ಯಕ್ಷ ಸನತ್ ಕುಮಾರ್ ಹಾಗೂ ಎಂ.ಪಿ.ಟಿ.ಎ ಅಧ್ಯಕ್ಷೆ ಸ್ವಾತಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಮಚಂದ್ರ ಕೆ.ಎಂ. ವಂದಿಸಿದರು. ಸ್ವಾತಿ.ಟಿ ನಿರೂಪಿಸಿದರು.




.jpg)

