ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎಸ್.ವಿ.ಟಿ.ಫ್ರೆಂಡ್ಸ್ ಮತ್ತು ಕೆ.ಎನ್. ವೆಂಕಟ್ರಮಣ ಹೊಳ್ಳ, ಕೆ.ಎನ್. ರಾಮಕೃಷ್ಣ ಹೊಳ್ಳ ಇವರ ಪ್ರಾಯೋಜಕ್ವದಲ್ಲಿ ನೂತನವಾಗಿ ನಿರ್ಮಿಸಿದ "ಅಕ್ಷಯ" ಅಗ್ರಶಾಲೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಶ್ರೀಪಾದಂಗಳವರು ಭಾನುವಾರ ದೀಪಬೆಳಗಿಸಿ ಉದ್ಘಾಟಿಸಿದರು.
ಕ್ಷೇತ್ರದ ಆಡಳಿತ ಸಮಿತಿ ಟ್ರಸ್ಟಿ ಅಧ್ಯಕ್ಷ ಎ.ಗೋವಿಂದನ್ ನಾಯರ್, ಮಲಬಾರ್ ದೇವಸ್ವಂ ಬೋರ್ಡ್ ಅಸಿಸ್ಟೇಂಟ್ ಕಮಿಷನರ್ ಕೆ.ಪಿ. ಪ್ರದೀಪ್ ಕುಮಾರ್, ವಾರ್ಡ್ ಸದಸ್ಯೆ ಎ.ಶ್ರೀಲತಾ ಟೀಚರ್, ಬಿಂದು ಜುವೆಲ್ಲರಿ ಮಾಲಕಿ ಶೋಭಾ, ಪಾಲುದಾರರಾದ ಅಭಿಲಾಷ್, ಡಾ. ಅಜಿತೇಶ್, ಧಾರ್ಮಿಕ ಮುಂದಾಳು ಡಾ. ಅನಂತ ಕಾಮತ್, ಅರ್ಜುನನ್ ತಾಯಲಂಗಾಡಿ, ಟ್ರಸ್ಟಿ ಬೋರ್ಡ್ ಸದಸ್ಯೆ ಉಷಾ ಅರ್ಜನನ್, ಸದಸ್ಯರುಗಳಾದ ಉಮೇಶ್ ಅಣಂಗೂರು, ಮನೋಜ್ ಎ.ಸಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಎಂ. ಮಹೇಶ್, ಎಸ್.ವಿಟಿ. ಫ್ರಂಡ್ಸ್ ಕಾರ್ಯದರ್ಶಿ ಹರೀಶ್ ಕೆ.ಆರ್ ಮೊದಲಾದವರು ಉಪಸ್ಥಿತರಿದ್ದರು.






