ಬದಿಯಡ್ಕ: ಕ್ಯಾಂಪ್ಕೋ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀರ್ಚಾಲು ಶಾಖೆಯ ಸಕ್ರಿಯ ಸದಸ್ಯ ರಾಧಾಕೃಷ್ಣ ಕೆದಿಲಾಯ ಪಣಿಯೆ ಅವರ ಹೃದಯ ಚಿಕಿತ್ಸೆಗೆ ಸಹಾಯ ಧನದ ಮೊತ್ತ ರೂ. ಐವತ್ತು ಸಾವಿರ ಮೊತ್ತದ ಚೆಕ್ಕನ್ನು ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಹಸ್ತಾಂತರಿಸಿದರು. ಈ ಸಂದರ್ಭ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಎಂ, ನಿರ್ದೇಶಕ ಪದ್ಮರಾಜ ಪಟ್ಟಾಜೆ, ನೀರ್ಚಾಲು ಶಾಖಾ ಪ್ರಬಂಧಕ ಗಣೇಶ ಪಿ. ಜೊತೆಗಿದ್ದರು.





