ತಿರುವನಂತಪುರಂ: ವಾರ್ಷಿಕ ಪರೀಕ್ಷೆಗಳು ಮುಗಿಯುವ ದಿನದಂದು ಸಂಘಷಕ್ಕೆ ಕಾರಣವಾಗುವ ಯಾವುದೇ ಪರಿಸ್ಥಿತಿಯನ್ನು ತಪ್ಪಿಸಲು ಸರ್ಕಾರ ರಾಜ್ಯದ ಶಾಲೆಗಳಿಗೆ ನಿರ್ದೇಶನ ನೀಡಿದೆ.
ಘರ್ಷಣೆಗಳು ಉದ್ಭವಿಸದಂತೆ ನೋಡಿಕೊಳ್ಳಲು ಶಿಕ್ಷಕರು ವಿಶೇಷ ಗಮನ ಹರಿಸಬೇಕು. ಶಾಲಾ ಆವರಣದಲ್ಲಿ ವಾಹನಗಳಲ್ಲಿ ಪ್ರದರ್ಶನಗಳನ್ನು ನಡೆಸುವಂತಿಲ್ಲ. ಅಗತ್ಯವಿದ್ದರೆ ಪೋಲೀಸರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿರುವರು.
ಸಾಮಾನ್ಯ ಶಿಕ್ಷಣ ಮತ್ತು ಉದ್ಯೋಗ ಸಚಿವ ವಿ. ಶಿವನ್‍ಕುಟ್ಟಿ ಅವರು ಕರೆದಿದ್ದ ಶಿಕ್ಷಣ ಅಧಿಕಾರಿಗಳ ಪ್ರಾದೇಶಿಕ ಸಭೆಗಳಲ್ಲಿ ಈ ನಿರ್ದೇಶನವನ್ನು ಹೊರಡಿಸಲಾಗಿದೆ.
ಈ ಸಂಬಂಧ ನಿರ್ದೇಶನವನ್ನು ಆನ್‍ಲೈನ್ ಸಭೆಯಲ್ಲಿ ನೀಡಲಾಗಿದೆ. ಶಾಲೆಯ ಕೊನೆಯ ದಿನದಂದು ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಆಚರಣೆಗಳನ್ನು ಮಾಡಬಾರದು ಎಂದು ಸಚಿವರು ಸಲಹೆ ನೀಡಿರುವರು.




.webp)
