HEALTH TIPS

Immigration Bill: ನೂತನ ವಲಸೆ ಮಸೂದೆ ರೂಪಿಸಿದ ಕೇಂದ್ರ ಸರ್ಕಾರ

 'ನಾಲ್ಕೂ ಕಾಯ್ದೆಗಳಲ್ಲಿ ಇರುವ ಅಂಶಗಳನ್ನು ಈ ಮಸೂದೆ ಒಳಗೊಂಡಿದೆ. ನಿಯಮಗಳನ್ನು ಸರಳಗೊಳಿಸಲಾಗಿದೆ' ಎಂದು ಸರ್ಕಾರ ಹೇಳಿದೆ. ಕೆಲವು ನಿಯಮಗಳಲ್ಲಿ 'ನಿರ್ದಿಷ್ಟ ವರ್ಗದ ವಿದೇಶಿಯರು' ಎಂಬ ಹೊಸ ವ್ಯಾಖ್ಯಾನವನ್ನು ಮಸೂದೆಯಲ್ಲಿ ಮಾಡಲಾಗಿದೆ. ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ.


ಕೆಲವು ಮುಖ್ಯಾಂಶಗಳು

ಸೆಕ್ಷನ್‌ 5: ವಲಸೆ ಬ್ಯೂರೊ ಸ್ಥಾಪನೆ

ಸೆಕ್ಷನ್‌ 7: ನಿರ್ದಿಷ್ಟ ವರ್ಗದ ವಿದೇಶಿಯರು ಭಾರತವನ್ನು ಪ್ರವೇಶಿಸದಂತೆ ತಡೆಯುವ ಅಥವಾ ಅಂಥವರ ಪ್ರವೇಶವನ್ನು ನಿಷೇಧಿಸುವ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಬಹುದು. ಇಂಥ ವಿದೇಶಿಯರು ಯಾವಾಗ ಭಾರತವನ್ನು ಬಿಟ್ಟು ಹೊರಡಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ.

  • ನಿರ್ದಿಷ್ಟ ವರ್ಗದ ವಿದೇಶಿಯರಿಗೆ ಕೆಲವು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಸೂಚನೆಗಳನ್ನು ಕೇಂದ್ರ ನೀಡಬಹುದು. ಇಂಥವರು ಸರ್ಕಾರವು ಕೇಳಿದ ವಿವರಗಳನ್ನು ನೀಡಬೇಕಾಗುತ್ತದೆ. ಅಗತ್ಯ ಬಿದ್ದರೆ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ನಿರ್ದಿಷ್ಟ ಸ್ಥಳದಲ್ಲಿಯೇ ವಾಸ ಮಾಡುವಂತೆ ಸರ್ಕಾರ ಸೂಚಿಸಬಹುದು. ಅವರ ಸಂಚಾರಕ್ಕೂ ನಿರ್ಬಂಧ ಹೇರಬಹುದು.

  • ಇವರು ತಮ್ಮ ಬಯೋಮೆಟ್ರಿಕ್‌ ವಿವರಗಳು, ಛಾಯಾಚಿತ್ರ, ಕೈಬರಹ ಮತ್ತು ಸಹಿಯ ಮಾದರಿಯನ್ನು ನೀಡಬೇಕಾಗುತ್ತದೆ. ಅಧಿಕಾರಿಗಳು ಬಯಸಿದರೆ ವೈದ್ಯಕೀಯ ಪರೀಕ್ಷೆಗೂ ಒಳಗಾಗಬೇಕಾಗುತ್ತದೆ. ಸರ್ಕಾರ ಸೂಚಿದರೆ, ನಿರ್ದಿಷ್ಟ ಜನರೊಂದಿಗೆ ಮಾತುಕತೆ ಅಥವಾ ಅವರೊಂದಿಗೆ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ

ಸೆಕ್ಷನ್‌ 8,9,10: ವಿದೇಶಿಯರು ತಂಗಿರುವ ಸ್ಥಳಗಳ ಮಾಲೀಕರು ಅವರ ಕುರಿತು ಸರ್ಕಾರಕ್ಕೆ ಮಾಹಿತಿ ನೀಡುವುದು ಕಡ್ಡಾಯ. ವಿಶ್ವವಿದ್ಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಕೂಡ ವಿದೇಶಿಯರ ಮಾಹಿತಿಯನ್ನು ನೀಡಬೇಕು

ಶಿಕ್ಷೆ ಪ್ರಮಾಣ

ಸೆಕ್ಷನ್‌ 21: ನಕಲಿ ದಾಖಲೆಗಳ ಮೂಲಕ ವಿದೇಶಿಯರು ಭಾರತವನ್ನು ಪ್ರವೇಶಿಸಿದರೆ ಐದು ವರ್ಷ ಜೈಲು ಅಥವಾ ₹5 ಲಕ್ಷಗಳವರೆಗೆ ದಂಡ

ಸೆಕ್ಷನ್‌ 22: ಭಾರತವನ್ನು ಪ್ರವೇಶಿಸಲು, ಇಲ್ಲಿಯೇ ಉಳಿದುಕೊಳ್ಳಲು ಅಥವಾ ಭಾರತದಿಂದ ಹೊರಹೋಗಲು ನಕಲಿ ಪಾಸ್‌ಪೋರ್ಟ್‌, ವೀಸಾವನ್ನು ಬಳಸಿದರೆ ಮತ್ತು ಈ ಅಕ್ರಮಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದರೆ, ಅಂಥವರಿಗೆ ಕನಿಷ್ಠ 2 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ. ಇಲ್ಲವೇ ₹1 ಲಕ್ಷದಿಂದ ₹10 ಲಕ್ಷದವರೆಗೆ ದಂಡ

ಸೆಕ್ಷನ್‌ 28: ಈ ಕಾಯ್ದೆಯಲ್ಲಿ ಹೇಳಲಾಗಿರುವ ನಿಯಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಅಥವಾ ತಮ್ಮ ಅಧಿಕಾರಿಗಳಿಗೆ ಸೂಚಿಸಬಹುದು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries