ನವದೆಹಲಿ: ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಅನಧಿಕೃತ ಡಿಜಿಟಲ್ ನ್ಯೂಸ್ ಚಾನೆಲ್, ಜಾಲತಾಣಗಳನ್ನು ನಿಯಂತ್ರಿಸಬೇಕು. ಇವುಗಳಿಗಾಗಿ ನಿಯಂತ್ರಣ ಪರವಾನಗಿ ಪ್ರಾಧಿಕಾರ ಸ್ಥಾಪಿಸಬೇಕು ಎಂದು ಅಸ್ಸಾಮ್‌ನ ಬಿಜೆಪಿ ಸಂಸದ ದಿಲಿಪ್ ಸೈಕಿಯಾ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಲೋಕಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ನ್ಯೂಸ್ ಪೋರ್ಟಲ್‌ಗಳು ಮತ್ತು ಡಿಜಿಟಲ್ ಸುದ್ದಿ ವಾಹಿನಿಗಳು ಸುಳ್ಳು ಸುದ್ದಿ ಹರಡುವುದು ಮತ್ತು ರಾಜಕೀಯ ನಾಯಕರ ಮೇಲೆ ವೈಯಕ್ತಿಕ ದಾಳಿ ನಡೆಸುವುದನ್ನು ತಡೆಯಲು ಸರ್ಕಾರ ನಿಯಂತ್ರಣ ಪರವಾನಗಿ ಪ್ರಾಧಿಕಾರವೊಂದನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಕೆಲ ಚಾನೆಲ್‌ಗಳು ರಾಜಕೀಯ ನಾಯಕರನ್ನು ಗುರಿಯಾಗಿರಿಸಿ ವೈಯಕ್ತಿಕ ದಾಳಿ ಮಾಡುತ್ತಿವೆ. ಇದರಿಂದ ಕೆಲವರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಘಟಿಸಿವೆ ಎಂದು ಹೇಳಿದರು.




