ನವದೆಹಲಿ: ಸಂಸತ್ ಸದಸ್ಯರ (MP) ವೇತನ, ಭತ್ಯೆ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಏರಿಕೆ ಮಾಡಿದೆ. ಈ ಕುರಿತು ಏಪ್ರಿಲ್ 1, 2023ರ ಪ್ರಕಾರ ಜಾರಿ ಬರುವಂತೆ ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರ ತಿಂಗಳ ವೇತನವನ್ನು ಪ್ರಸ್ತುತ 1 ಲಕ್ಷ ರೂ.ದಿಂದ 1.24 ಲಕ್ಷ ರೂ.ಗಳ ವರೆಗೂ ಏರಿಕೆ ಮಾಡಿದೆ.
ಜತೆಗೆ ದಿನದ ಭತ್ಯೆಯನ್ನು 2,000 ರೂ. ದಿಂದ 2,500 ರೂ. ವರೆಗೆ ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಲ್ಲಿ ತಿಳಿಸಲಾಗಿದೆ.
ಮಾಜಿ ಸಂಸದರಿಗೆ ನೀಡಲಾಗುವ ಪಿಂಚಣಿಯನ್ನು ಪ್ರಸ್ತುತ 25,000 ರೂ.ಗಳಿಂದ 31,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಐದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿ ಪಿಂಚಣಿಯನ್ನು ಹಿಂದಿನ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಸಂಸತ್ತಿನ ಬಜೆಟ್ ಅಧಿವೇಶನ ನಡೆಯುತ್ತಿರುವಾಗಲೇ ಸಂಸದರ ವೇತನ, ಭತ್ಯೆ ಮತ್ತು ಪಿಂಚಣಿಗಳ ಪರಿಷ್ಕರಣೆಯನ್ನು ಘೋಷಿಸಲಾಗಿದೆ.




