ನವದೆಹಲಿ: ಉತ್ತರ ಭಾರತ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬಿಸಿಲ ಝಳ ಹೆಚ್ಚತೊಡಗಿದೆ. ರವಿವಾರ ಒಂದೇ ದಿನ ದೇಶದ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ ಗಳ 21 ನಗರಗಳಲ್ಲಿ ತಾಪಮಾನ 42 ಡಿಗ್ರಿಗಿಂತ ಹೆಚ್ಚಾಗಿತ್ತು. ವಿವಿಧ ನಗರಗಳಲ್ಲಿ ತಾಪಮಾನ 3 ರಿಂದ 6.9 ಡಿಗ್ರಿವರೆಗೆ ಏರಿಕೆಯಾಗಿದೆ.
ರಾಜಸ್ಥಾನದ ಬಾರ್ಮರ್‌ನಲ್ಲಿ 45.6 ಡಿಗ್ರಿ ತಾಪ ದಾಖಲಾಗಿತ್ತು. ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬಾರ್ಮರ್‌ನಲ್ಲಿ ತಾಪಮಾನದ ದಾಖಲೆ ಇದಾಗಿದೆ. 1998ರ ಏ.3ರಂದು ಇದೇ ಸ್ಥಳದಲ್ಲಿ 45.2 ಡಿಗ್ರಿ ದಾಖಲಾ ಗಿತ್ತು. ಜೈಸಲ್ಮೇರ್‌ನಲ್ಲಿ 45, ಜೋಧ್‌ಪುರದಲ್ಲಿ 43, ಕೋಟಾದಲ್ಲಿ 42.4 ಡಿಗ್ರಿ ತಾಪಮಾನ ದಾಖಲಾ ಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.




