ಬದಿಯಡ್ಕ: ನೆಲ್ಲಿಕಟ್ಟೆ ಮೀನಾಡಿಪಳ್ಳ ಶ್ರೀ ವನದುರ್ಗಾ ವನಶಾಸ್ತಾ ರಕ್ತೇಶ್ವರೀ ನಾಗ ಕ್ಷೇತ್ರದ 25ನೇ ವಾರ್ಷಿಕ ಮಹೋತ್ಸವವು ಏ.25 ಮತ್ತು ಏ.26 ರಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರರ ನೇತೃತ್ವದಲ್ಲಿ ಜರಗಲಿದೆ.
ಏ.25 ರಂದು ಬೆಳಗ್ಗೆ 10.30ಕ್ಕೆ ಉಗ್ರಾಣ ತುಂಬಿಸುವುದು, ರಾತ್ರಿ 7ಕ್ಕೆ ಭರತನಾಟ್ಯ, 8 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಲಿದೆ. ಏ.26 ರಂದು ಬೆಳಗ್ಗೆ 6ಕ್ಕೆ ಗಣಪತಿ ಹೋಮ, 8.30 ರಿಂದ ಶ್ರೀ ವನದುರ್ಗಾ ಬಾಲಗೋಕುಲಂ ಮೀನಾಡಿಪಳ್ಳ ಇವರಿಂದ ಭಜನೆ, 10 ರಿಂದ ಶ್ರೀರಾಮ ಭಜನಾ ಸಂಘ ಪೈಕ ಮತ್ತು ಶ್ರೀ ಅಯ್ಯಪ್ಪ ಭಜನಾ ತಂಡ ಬಾಲಡ್ಕ ಇವರಿಂದ ಹಾಗೂ 11.30 ರಿಂದ ಶ್ರೀ ವನದುರ್ಗಾ ವನಶಾಸ್ತಾ ಭಜನಾ ಸಂಘ ಮೀನಾಡಿಪಳ್ಳ ಇವರಿಂದ ಭಜನೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ. 12.45ಕ್ಕೆ ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರೀ ಮಹಿಳಾ ಭಜನಾ ತಂಡದವರಿಂದ ಭಜನೆ, ಸಂಜೆ ಶ್ರೀ ಶಕ್ತಿ ಫ್ರೆಂಡ್ಸ್ ಕ್ಲಬ್ ಶಕ್ತಿನಗರ ಮತ್ತು ಸ್ಥಳೀಯರಿಂದ ಉಲ್ಪೆ ಮೆರವಣಿಗೆ, 7ಕ್ಕೆ ಮಾತೃಸಮಿತಿ ಶ್ರೀ ವನದುರ್ಗಾ ದೇವಸ್ಥಾನ ಮೀನಾಡಿಪಳ್ಳ ಇವರಿಂದ ತಿರುವಾದಿರ, 7.20 ರಿಂದ ಶಿವಗಂಗಾ ಮುಳ್ಳೇರಿಯ, ಚಿಲಂಬೊಲಿ ಬಾಲಡ್ಕ, ಎಂ.ಜಿ.ಗ್ರೂಪ್ ಮೀನಾಡಿಪಳ್ಳ, ಶ್ರೀ ವನದುರ್ಗಾ ಮಾತೃಸಮಿತಿ ಅದ್ರುಗುಳಿ ಇವರಿಂದ ಕೈಕೊಟ್ಟು ಕಳಿ. 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. ರಾತ್ರಿ 9.30 ರಿಂದ ಟೀಮ್ ಮಿರಾಕಲ್ ಮೀನಾಡಿಪಳ್ಳ ಪ್ರಾಯೋಜಕತ್ವದಲ್ಲಿ ಘೋಕ್ ಮೆಗಾ ಶೋ ನಡೆಯಲಿದೆ. ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.




