ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ 46ನೇ ವಾರ್ಷಿಕೋತ್ಸವ ಏ.28 ರಂದು ಸೋಮವಾರ ತಂತ್ರಿವರ್ಯ ವೇದಮೂರ್ತಿ ಬಳ್ಳಪದವು ಡಾ. ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಅಂದು ಅರುಣೋದಯ ಕಾಲದಲ್ಲಿ ಶ್ರೀಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಧ್ವಜಾರೋಹಣಗೈಯಲಿದ್ದಾರೆ. 6.30ಕ್ಕೆ ಶುದ್ಧಿಕಲಶ, ಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ, 9ರಿಂದ ಚಪ್ಪರ ಮದುವೆ, 9.30ರಿಂದ ತುಳಸೀ ಹಾರ ನೇಯುವ ಸ್ಪರ್ಧೆ, 9.35ರಿಂದ ತುಲಾಭಾರ ಸೇವೆ, 10.30ರಿಂದ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಮುಂದಾಳು ಡಿ.ಎನ್. ಮಣಿಯಾಣಿ ಮಾನ್ಯ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಧುಸೂದನ ಆಯರ್ ಮಂಗಳೂರು, ಡಾ. ಬೇ.ಸೀ.ಗೋಪಾಲಕೃಷ್ಣ ಭಟ್, ರಾಜೇಶ್ ಪದ್ಮಾರು ಬೆಂಗಳೂರು, ಸಂತೋಷ್ ರೈ ಗಾಡಿಗುಡ್ಡೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಮುಖರಾದ ನಾರಾಯಣ ಭಟ್ ಕಲ್ಲಕಳಂಬಿ, ಶ್ರೀಧರ ಮಣಿಯಾಣಿ ಮಂಗಳೂರು, ಗಣೇಶ್ ಭಟ್ ಅಳಕ್ಕೆ ನೀರ್ಚಾಲು ಇವರಿಗೆ ಸನ್ಮಾನ ನಡೆಯಲಿದೆ. ಅಗಲ್ಪಾಡಿ ಪಾಂಚಜನ್ಯ ಕುಣಿತ ಭಜನಾ ಸಂಘದ ಶಿಕ್ಷಕ ರವಿರಾಜ್ ಏಳ್ಕಾನ, ಭಜನಾ ಸಂಘದ ಶಿಕ್ಷಕಿ ಕು. ಶಿವಪ್ರಿಯಾ ಇವರಿಗೆ ಗೌರವ ಅಭಿನಂದನೆ ಹಾಗೂ ಅಗಲ್ಪಾಡಿ ಪುರದೊಡೆಯ ಭಕ್ತಿಗೀತೆ ಬಿಡುಗಡೆ, ಪ್ರತಿಭಾ ಪುರಸ್ಕಾರ ನಡೆಯಲಿದೆ. 12.30ಕ್ಕೆ ಯುವ ವಿಭಾಗದ ಪಾತ್ರೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ. ಮಧ್ಯಾಹ್ನ 1.ರಿಂದ 3.30ರ ತನಕ ಸುಧಾಕರ ಕೋಟೆಕುಂಜತ್ತಾಯ ಕಾಸರಗೋಡು ಇವರಿಂದ ಭಕ್ತಸುದಾಮ ಹರಿಕಥಾ ಸತ್ಸಂಗ, 3 ರಿಂದ 4ರ ತನಕ ನಮಸ್ತೆ ಇಂಡಿಯಾ ಬೆಂಗಳೂರು ಸಾದರಪಡಿಸುವ ಪೌರಾಣಿಕ ರಸಪ್ರಶ್ನೆ, 4 ರಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ 8.30ಕ್ಕೆ ಮಹಾಪೂಜೆ, ಮಹಾಮಂಗಳಾರತಿ ನಡೆಯಲಿದೆ. 8.30ರಿಂದ ಕೈಕೊಟ್ಟಿಕಳಿ, ನೃತ್ಯವೈವಿಧ್ಯ, ರಾತ್ರಿ 9ರಿಂದ ಕಲಾರತ್ನ ಪ್ರಶಸ್ತಿ ಪುರಸ್ಕøತ ಪ್ರವೀಣ್ ಜಯ್ ಸಾರಥ್ಯದ ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ಇವರಿಂದ ಭಕ್ತಿಗಾನಾಮೃತ ವೀರಾಸ್ ಅಗಲ್ಪಾಡಿ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ರಾತ್ರಿ 12 ಕ್ಕೆ ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.

.jpg)
