HEALTH TIPS

53 ದೇಶಗಳ 402 ಪರ್ವತಾರೋಹಿಗಳಿಗೆ ಮೌಂಟ್‌ ಎವರೆಸ್ಟ್‌ ಏರಲು ಅನುಮತಿ

ಕಠ್ಮಂಡು: ಈ ಬಾರಿಯ ಮೌಂಟ್‌ ಎವರೆಸ್ಟ್‌ ಶಿಖರ ಏರಲು 53 ದೇಶಗಳ 402 ಪರ್ವತಾರೋಹಿಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 74 ಮಂದಿ ಮಹಿಳೆಯರೂ ಸೇರಿದ್ದಾರೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ಹೇಳಿದೆ.

ಈವರೆಗೆ ಇಲಾಖೆಯು 8,848.86 ಮೀಟರ್‌ ಎತ್ತರದ ಶಿಖರವೇರಲು 41 ಬಾರಿ ಅವಕಾಶ ನೀಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 75 ಮಹಿಳೆಯರು, 330 ಪುರುಷರು ಸೇರಿ 414 ಮಂದಿಗೆ ಶಿಖರ ಏರಲು ಅವಕಾಶ ನೀಡಲಾಗಿತ್ತು ಎಂದು ಹೇಳಿದೆ.

ಈ ವರ್ಷ ನೇಪಾಳದ ವಿವಿಧ ಶಿಖರಗಳನ್ನು ಏರಲು ನೀಡಿದ್ದ ಅನುಮತಿಯಲ್ಲಿ ಒಟ್ಟು ₹68.4 ಕೋಟಿ ಗೌರವ ಧನ ಸಂಗ್ರಹವಾಗಿದೆ. ಅದರಲ್ಲಿ ಮೌಂಟ್‌ ಎವರೆಸ್ಟ್‌ ಮಾತ್ರ ಏರಲು ನೀಡಿದ ಗೌರವ ಧನದ ಸಂಗ್ರಹ ₹59.5 ಕೋಟಿ ಆಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೇಪಾಳಿಗರು ಮತ್ತು ವಿದೇಶಿಗರು ಸೇರಿ ಒಟ್ಟು 8 ಸಾವಿರ ಪರ್ವತಾರೋಹಿಗಳು ಈವರೆಗೆ ಮೌಂಟ್‌ ಎವರೆಸ್ಟ್‌ ಶಿಖರದ ಪರ್ವತಾರೋಹಣವನ್ನು ಕೈಗೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries