ಮಲಪ್ಪುರಂ: ಮಲಪ್ಪುರಂನಲ್ಲಿ ಬೀದಿ ನಾಯಿ ಕಚ್ಚಿದ ಪರಿಣಾಮ ಚಿಕಿತ್ಸೆಯಲ್ಲಿದ್ದ ಐದು ವರ್ಷದ ಬಾಲಕಿ ರೇಬೀಸ್ ನಿಂದ ಸಾವನ್ನಪ್ಪಿದ್ದಾಳೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸನಾ ಫಾರಿಸ್ ಮೃತ ದುರ್ದೈವಿ ಬಾಲಕಿ.
ಸನಾ ಪೆರುವಳ್ಳೂರಿನ ಕಕ್ಕತಡಂ ಮೂಲದವರ ಪುತ್ರಿ. ಮಾರ್ಚ್ 29 ರಂದು ಸನಾ ಮೇಲೆ ಬೀದಿ ನಾಯಿ ದಾಳಿ ಮಾಡಿತ್ತು.
ಮಗು ಕ್ಯಾಂಡಿ ಖರೀದಿಸಲು ತೆರಳಿದ್ದಾಗ ಬೀದಿ ನಾಯಿ ದಾಳಿ ಮಾಡಿತ್ತು. ನಾಯಿ ಮಗುವಿನ ತಲೆ ಮತ್ತು ಕಾಲಿಗೆ ಕಚ್ಚಿ ಗಾಯಗೊಳಿಸಿತ್ತು. ಮಗುವನ್ನು ತಕ್ಷಣ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಐಡಿಆರ್‍ಬಿ ಲಸಿಕೆ ನೀಡಲಾಯಿತು, ಆದರೆ ನಂತರ ರೇಬೀಸ್ ದೃಢಪಟ್ಟಿತು.
ಕುತ್ತಿಗೆಯ ಮೇಲಿನ ಗಾಯವು ಗಂಭೀರ ಮತ್ತು ಆಳವಾಗಿದ್ದರಿಂದ ಲಸಿಕೆ ಪರಿಣಾಮಕಾರಿಯಾಗದಿರಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಶುಕ್ರವಾರ ಮಗುವನ್ನು ರೇಬೀಸ್ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ದಿನ ಈ ಮಗು ಸೇರಿದಂತೆ ಏಳು ಜನರಿಗೆ ಕಚ್ಚಿತ್ತು. ಆದರೆ ಮಗುವನ್ನು ಹೊರತುಪಡಿಸಿ ಎಲ್ಲರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ.





