ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ನೀತಿಯಿಂದ ತಪ್ಪಿಸಿಕೊಳ್ಳಲು ಆಯಪಲ್ ಐಫೋನ್ ಕಂಪನಿ ಭಾರತದಿಂದ 600 ಟನ್‌ಗಳಷ್ಟು ಮೊಬೈಲ್ ಪೋನ್‌ಗಳನ್ನು ಕಾರ್ಗೊ ವಿಮಾನದ ಮೂಲಕ ಅಮೆರಿಕಕ್ಕೆ ಏರ್‌ಲಿಫ್ಟ್ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ತಿಳಿಸಿದೆ.
ಸುಂಕ ನೀತಿ ಜಾರಿಗೂ ಮುನ್ನ ಮಾರ್ಚ್‌ನಲ್ಲಿ 100 ಟನ್‌ಗಳ ಸಾಮರ್ಥ್ಯದ ಆರು ಕಾರ್ಗೊ ವಿಮಾನಗಳಲ್ಲಿ ಸರಿಸುಮಾರು 15 ಲಕ್ಷ 'ಐಫೋನ್ 14' ಮತ್ತು 350 ಗ್ರಾಂ ತೂಕದ ಚಾರ್ಜರ್‌ಗಳನ್ನು ಸಾಗಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಭಾರತೀಯ ವಿಮಾನಯಾನ ಸಚಿವಾಲಯ ಮತ್ತು ಆಯಪಲ್ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆಯಪಲ್ ಕಂಪನಿ ಜಾಗತಿಕವಾಗಿ ವರ್ಷಕ್ಕೆ 2.2 ಕೋಟಿ ಐಫೋನ್‌ಗಳನ್ನು ಮಾರಾಟ ಮಾಡುತ್ತದೆ. ಅದರಲ್ಲಿ ಅಮೆರಿಕಕ್ಕೆ ರಫ್ತಾಗುವ ಒಟ್ಟೂ ಮಾರಾಟದ ಐದರಷ್ಟು ಐಫೋನ್‌ಗಳು ಭಾರತದಿಂದ ಸಾಗಣೆಯಾಗಲಿವೆ ಉಳಿದಷ್ಟು ಚೀನಾ ಪೂರೈಸುತ್ತದೆ.




