HEALTH TIPS

ಚಾರ್‌ಧಾಮ್‌ ಯಾತ್ರೆ: 60 ಲಕ್ಷ ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ

ಮುಂಬೈ: ಪ್ರಸಕ್ತ ಸಾಲಿನ ಚಾರ್‌ಧಾಮ್‌ ಯಾತ್ರೆಯಲ್ಲಿ 50 ರಿಂದ 60 ಲಕ್ಷ ಮಂದಿ ಯಾತ್ರಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರಿಂದ ಅಂದಾಜು ₹7500 ಕೋಟಿ ಆದಾಯ ಸೃಷ್ಟಿಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ತೀರ್ಥಯಾತ್ರೆ ಆಯೋಜಕ ಸಂಸ್ಥೆಗಳಾದ ಟೆಂಪಲ್‌ ಕೆನಕ್ಟ್‌ ಹಾಗೂ ಟ್ರಿಪ್ ಟು ಟೆಂಪಲ್ಸ್‌ ಸಂಸ್ಥೆಯ ಮುಖ್ಯಸ್ಥರಾದ ಗಿರೀಶ್ ಕುಲಕರ್ಣಿ, ವಿಕಾಸ್‌ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

'ಈ ಬಾರಿ ಚಾರ್‌ಧಾಮ್‌ ಯಾತ್ರೆಗೆ ಜನರು ಅತ್ಯುತ್ಸಾಹ ತೋರಿದ್ದು, 50 ರಿಂದ 60 ಲಕ್ಷ ಮಂದಿ ಪಾಲ್ಗೊಳ್ಳಬಹುದು. ಇದರಿಂದ ಹೋಟೆಲ್‌, ಹೋಮ್‌ ಸ್ಟೇ ಸೇರಿದಂತೆ ಒಟ್ಟು 10,000 ಮಂದಿಗೆ ಉದ್ಯೋಗ ಸಿಗುವುದರ ಜತೆಗೆ ₹7500 ಕೋಟಿ ಆದಾಯ ಸೃಷ್ಟಿಯಾಗಲಿದೆ' ಎಂದಿದ್ದಾರೆ.

ದೇವಭೂಮಿ ಖ್ಯಾತಿಯ ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥ ಕ್ಷೇತ್ರಗಳ ಯಾತ್ರೆಯನ್ನು ಚಾರ್‌ಧಾಮ್‌ ಯಾತ್ರೆ ಎಂದು ಕರೆಯಲಾಗುತ್ತದೆ. 2024ರಲ್ಲಿ 43 ಲಕ್ಷ ಮಂದಿ ಚಾರ್‌ಧಾಮ್‌ ಯಾತ್ರೆ ಕೈಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries