HEALTH TIPS

ರಿಲಯನ್ಸ್‌ಗೆ ಭರ್ಜರಿ ಲಾಭ, ಸೆನ್ಸೆಕ್ಸ್‌ 800 ಅಂಕ ಹೈ ಜಂಪ್‌

ಮುಂಬ್ಯೆ: ಮುಂಬಯಿ ಷೇರು ಮಾರುಕಟ್ಟೆ(Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಬೆಳಗ್ಗೆ 800 ಅಂಕಗಳ ಏರಿಕೆಯೊಂದಿಗೆ ಶುಭಾರಂಭ ಮಾಡಿತು. ಮುಖ್ಯವಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಬ್ಯಾಂಕ್‌ಗಳ ಷೇರುಗಳ ದರದಲ್ಲಿ ಏರಿಕೆ ದಾಖಲಾಯಿತು. ಬೆಳಗ್ಗೆ 10.50ರ ವೇಳೆಗೆ ಸೆನ್ಸೆಕ್ಸ್‌ 804 ಅಂಕ ಏರಿಕೆಯಾಗಿ 80,009 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ನಿಫ್ಟಿ (nifty) 218 ಅಂಕ ಜಿಗಿದು 24,257ಕ್ಕೆ ಚೇತರಿಸಿತು.

ರಿಲಯನ್ಸ್‌ಗೆ ನಿರೀಕ್ಷೆಗೂ ಮೀರಿದ ಲಾಭ:

ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಷೇರುಗಳ ದರದಲ್ಲಿ 4% ಏರಿಕೆಯಾಯಿತು. ಬಿಎಸ್‌ಇನಲ್ಲಿ 1,351 ರುಪಾಯಿಗೆ ಜಿಗಿಯಿತು. ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 19,407 ಕೋಟಿ ರುಪಾಯಿ ನಿವ್ವಳ ಲಾಭ ದಾಖಲಿಸಿತ್ತು. ಮಾರುಕಟ್ಟೆಯ ನಿರೀಕ್ಷೆಯನ್ನೂ ಮೀರಿದ ಲಾಭ ಇದಾಗಿದೆ (18,471 ಕೋಟಿ ಲಾಭ ಬರಬಹುದು ಎಂದು ಅಂದಾಜಿಸಲಾಗಿತ್ತು.) ರಿಲಯನ್ಸ್‌ ಈ ತ್ರೈಮಾಸಿಕದಲ್ಲಿ 2.88 ಲಕ್ಷ ಕೋಟಿ ರುಪಾಯಿಗಳ ಆದಾಯವನ್ನೂ ಗಳಿಸಿದೆ. ಬ್ಯಾಂಕಿಂಗ್‌ ಷೇರುಗಳ ಗಣನೀಯ ಚೇತರಿಕೆಯೂ ಪ್ರಭಾವ ಬೀರಿತು. ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫಿನ್‌ ಸರ್ವ್‌ ಮತ್ತು ಮಹೀಂದ್ರಾ ಆಂಡ್‌ ಮಹೀಂದ್ರಾ ಬೆಳಗ್ಗಿನ ವಹಿವಾಟಿನಲ್ಲಿ ಲಾಭ ಗಳಿಸಿವೆ.

ವಿದೇಶಿ ಹೂಡಿಕೆಯ ಹೆಚ್ಚಳ:

ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆ ಕ್ಷೀಣಿಸಿರುವುದು ಕೂಡ ಸಕಾರಾತ್ಮಕ ಪ್ರಭಾವ ಬೀರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಕಳೆದ ಶುಕ್ರವಾರ 2,952 ಕೋಟಿ ರುಪಾಯಿಗಳ ಷೇರುಗಳನ್ನು ಖರೀದಿಸಿದ್ದಾರೆ. ಕಳೆದೊಂದು ವಾರದಿಂದೀಚೆಗೆ 17,425 ಕೋಟಿ ರುಪಾಯಿಗಳ ಹೂಡಿಕೆ ಮಾಡಿದ್ದಾರೆ. ಇದು ಸೂಚ್ಯಂಕಗಳ ಜಿಗಿತಕ್ಕೆ ಮತ್ತೊಂದು ಕಾರಣವಾಗಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಇಂಡೆಕ್ಸ್‌, ಟೋಕಿಯೊದ ನಿಕ್ಕಿ 225, ಹಾಂಕಾಂಗ್‌ನ ಹಾಂಗ್‌ ಸೆಂಗ್‌ ಸೂಚ್ಯಂಕಗಳು ಚೇತರಿಸಿತ್ತು.

ಅಥೆರ್‌ ಎನರ್ಜಿ ಐಪಿಒ:

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ನ ಷೇರು ದರ ಸೋಮವಾರ 4.5% ಇಳಿಯಿತು. ತ್ರೈಮಾಸಿಕ ಫಲಿತಾಂಶದಲ್ಲಿ ಉಂಟಾಗಿರುವ ಇಳಿಕೆಯೇ ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಅಥೆರ್‌ ಎನರ್ಜಿ ಕಂಪನಿಯ ಐಪಿಒ ಆರಂಭವಾಗಿದ್ದು, ಷೇರಿನ ದರ 304-321 ರುಪಾಯಿಯ ಶ್ರೇಣಿಯಲ್ಲಿದೆ.

ಭಾರತೀಯ ಷೇರು ಮಾರುಕಟ್ಟೆಯಲ್ಲಿ BSE ಸೂಚ್ಯಂಕ ಸೆನ್ಸೆಕ್ಸ್‌ ಮತ್ತು NSE ಸೂಚ್ಯಂಕ ನಿಫ್ಟಿ ಕಳೆದ ಕೆಲ ದಿನಗಳಿಂದ ಗಣನೀಯವಾಗಿ ಚೇತರಿಸುತ್ತಿವೆ. ಅಮೆರಿಕದ ಟಾರಿಫ್‌ ಸಂಘರ್ಷಕ್ಕೆ 90 ದಿನಗಳ ತಡೆ ಬಿದ್ದಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ.

ICICI Securities ಪ್ರಕಾರ ನಿಫ್ಟಿ ಮುಂದಿನ 6 ತಿಂಗಳಿನಲ್ಲಿ 25,500 ಅಂಕಗಳ ಗಡಿಯನ್ನು ದಾಟಲಿದೆ. ಬ್ಯಾಂಕಿಂಗ್‌, ಪಿಎಸ್‌ಯು ಅಥವಾ ಸಾರ್ವಜನಿಕ ವಲಯ, ಲೋಹ, ಟೆಲಿಕಾಂ, ಫಾರ್ಮಾ ಮತ್ತು Consumption ವಲಯದ ಷೇರುಗಳು ಗಮನಾರ್ಹ ಲಾಭ ಗಳಿಸಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್‌ ತಿಳಿಸಿದೆ. ಜತೆಗೆ ಐಟಿ, ಕ್ಯಾಪಿಟಲ್‌ ಗೂಡ್ಸ್‌ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ವಾಲ್ಯುಯೇಶನ್‌ ಆಕರ್ಷಕವಾಗಿದೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries