HEALTH TIPS

ಸೆನ್ಸೆಕ್ಸ್ 855 ಅಂಶ ಜಿಗಿತ

ಮುಂಬೈ: ಬ್ಯಾಂಕಿಂಗ್ ಮತ್ತು ಐ.ಟಿ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರು ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಶೇ 1ಕ್ಕೂ ಹೆಚ್ಚು ಏರಿಕೆ ಕಂಡಿವೆ.

ಕಂಪನಿಗಳ ಮಾರ್ಚ್‌ ತ್ರೈಮಾಸಿಕದ ಗಳಿಕೆ ಮತ್ತು ವಿದೇಶಿ ಬಂಡವಾಳದ ಒಳಹರಿವು ಸಹ ಸೂಚ್ಯಂಕಗಳ ಏರಿಕೆಗೆ ನೆರವಾದವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 855 ಅಂಶ (ಶೇ 1.09) ಏರಿಕೆಯಾಗಿ, 79,408ಕ್ಕೆ ವಹಿವಾಟು ಅಂತ್ಯಗೊಂಡಿತು. ವಹಿವಾಟಿನ ವೇಳೆ 1,081 ಅಂಶ ಹೆಚ್ಚಳವಾಗಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 273 ಅಂಶ (ಶೇ 1.15) ಏರಿಕೆಯಾಗಿ, 24,125ಕ್ಕೆ ಕೊನೆಗೊಂಡಿತು.

ಕಳೆದ ಐದು ವಹಿವಾಟಿನಲ್ಲಿ ಸೆನ್ಸೆಕ್ಸ್‌ 5,561 ಅಂಶ ಮತ್ತು ನಿಫ್ಟಿ 1,726 ಅಂಶ ಏರಿಕೆಯಾಗಿವೆ. ಇದರಿಂದ ಹೂಡಿಕೆದಾರರ ಸಂಪತ್ತು ₹32 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯವು ₹425 ಲಕ್ಷ ಕೋಟಿಯಾಗಿದೆ.

ಸೆನ್ಸೆಕ್ಸ್ ಗುಚ್ಛದಲ್ಲಿ ಟೆಕ್‌ ಮಹೀಂದ್ರ, ಇಂಡಸ್‌ಇಂಡ್‌ ಬ್ಯಾಂಕ್‌, ಪವರ್‌ಗ್ರಿಡ್‌, ಬಜಾಜ್‌ ಫಿನ್‌ಸರ್ವ್‌, ಮಹೀಂದ್ರ ಆಯಂಡ್ ಮಹೀಂದ್ರ, ಎಚ್‌ಸಿಎಲ್‌ ಟೆಕ್‌, ಎಸ್‌ಬಿಐ, ಕೋಟಕ್‌ ಮಹೀಂದ್ರ ಬ್ಯಾಂಕ್, ಇನ್ಫೊಸಿಸ್‌ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಅದಾನಿ ಪೋರ್ಟ್ಸ್, ಹಿಂದೂಸ್ಥಾನ್ ಯುನಿಲಿವರ್, ಐಟಿಸಿ, ಏಷ್ಯನ್‌ ಪೇಂಟ್ಸ್ ಮತ್ತು ನೆಸ್ಲೆ ಷೇರಿನ ಮೌಲ್ಯದಲ್ಲಿ ಇಳಿದಿದೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ ಮತ್ತು ಶಾಂಘೈ ಸಕಾರಾತ್ಮಕ ವಹಿವಾಟು ನಡೆಸಿದ್ದರೆ, ಟೋಕಿಯೊ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರದ ವಹಿವಾಟಿನಲ್ಲಿ ₹4,667 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲದ ದರ ಶೇ 2.71ರಷ್ಟು ಹೆಚ್ಚಳವಾಗಿದೆ. ಪ್ರತೀ ಬ್ಯಾರೆಲ್ 66.25 ಡಾಲರ್ (₹5,656) ಆಗಿದೆ.

'ಮಾರ್ಚ್‌ನಲ್ಲಿ ಕಂಪನಿಗಳ ತ್ರೈಮಾಸಿಕದ ಗಳಿಕೆಯು ಉತ್ತಮವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸುಂಕ ನೀತಿಗೆ 90 ದಿನದ ವಿರಾಮ ನೀಡಿದ್ದಾರೆ. ಇದರಿಂದ ವಿದೇಶಿ ಒಳಹರಿವು ಹೆಚ್ಚಳವಾಗಿದ್ದು, ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ' ಎಂದು ಲೆಮನನ್‌ ಮಾರ್ಕೆಟ್ಸ್ ಡೆಸ್ಕ್‌ನ ವಿಶ್ಲೇಷಕ ಸತೀಶ್ ಚಂದ್ರ ಅಲುರಿ ಹೇಳಿದ್ದಾರೆ.

ಕಳೆದ ಐದು ವಹಿವಾಟಿನಲ್ಲಿ ಸೆನ್ಸೆಕ್ಸ್‌ 5,561, ನಿಫ್ಟಿ 1,726 ಅಂಶ ಏರಿಕೆ ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹425 ಲಕ್ಷ ಕೋಟಿ ಬ್ರೆಂಟ್‌ ಕಚ್ಚಾ ತೈಲ ದರ ಪ್ರತೀ ಬ್ಯಾರೆಲ್‌ಗೆ 66.25 ಡಾಲರ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries