ವ್ಯಾಟಿಕನ್ ಸಿಟಿ: ಡಬಲ್ ನ್ಯುಮೋನಿಯಾದಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅನಾರೋಗ್ಯದಿಂದ ಬಳಲುತ್ತಿದ್ದು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರೋಮ್ ಕೊಲೋಸಿಯಮ್‌ನಲ್ಲಿ ಶುಕ್ರವಾರ (ಏ .18) ನಡೆದ ವಾರ್ಷಿಕ ಮೆರವಣಿಗೆಯಲ್ಲಿ ಮೂರನೇ ವರ್ಷವೂ ಕೂಡ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ.
ಕೊಲೋಸಿಯಮ್‌ನಲ್ಲಿರುವ ವಯಾ ಕ್ರೂಸಿಸ್ ಕ್ರಿಶ್ಚಿಯನ್ನರಿಗೆ ಪುಣ್ಯಸ್ಥಳವಾಗಿದೆ.ಇದು ಯೇಸುವಿನ ಶಿಲುಬೆಗೇರಿಸಿದ ಕ್ಷಣವನ್ನು ನೆನೆಪಿಸುತ್ತದೆ.ಗುಡ್ ಫ್ರೈಡೇ ನಂತರ ಭಾನುವಾರ ಈಸ್ಟರ್ ಆಚರಿಸಲಾಗುತ್ತದೆ.ಇದು ಚರ್ಚ್‌ನ ಪ್ರಾರ್ಥನಾ ಕ್ಯಾಲೆಂಡರ್‌ನಲ್ಲಿ ಪ್ರಮುಖ ದಿನವಾಗಿದೆ. 2013 ರಿಂದ ಪೋಪ್ ಆಗಿರುವ ಫ್ರಾನ್ಸಿಸ್, ಸದ್ಯ ಡಬಲ್ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ.
ಅವರು 2023 ಮತ್ತು 2024 ರಲ್ಲಿ ಕೊಲೋಸಿಯಮ್ ಈವೆಂಟ್ ನಲ್ಲಿ ಭಾಗವಿಸುವುದನ್ನು ಬಿಟ್ಟುಬಿಟ್ಟರು.
ಫ್ರಾನ್ಸಿಸ್ ತಮ್ಮ 12 ವರ್ಷಗಳ ಪೋಪ್ ಹುದ್ದೆಯಲ್ಲಿ ಎರಡನೇ ಬಾರಿಗೆ ಈ ವರ್ಷ ಸಮಾರಂಭಕ್ಕೆ ಗೈರಾಗಿದ್ದಾರೆ.
ಇನ್ನು ವಾರಾಂತ್ಯದ ಇತರ ಈಸ್ಟರ್ ಸೇವೆಗಳಿಗೆ ಫ್ರಾನ್ಸಿಸ್ ಹಾಜರಾಗುತ್ತಾರೆಯೇ ಎಂದು ವ್ಯಾಟಿಕನ್ ಇನ್ನೂ ಏನನ್ನು ಹೇಳಿಲ್ಲ.




