ಮಂಜೇಶ್ವರ : ಮಂಜೇಶ್ವರದ ವಸತಿಗೃಹವೊಂದರಿಂದ ಮಾದಕ ದ್ರವ್ಯ ಹಾಗೂ ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಮಾಡ ನಿವಾಸಿ ಮಹಮ್ಮದ್ ಅನ್ವರ್ ಹಾಗೂ ಬೆಳ್ತಂಗಡಿ ನಿವಾಸಿ ಮಹಮ್ಮದ್ ಮನ್ಸೂರ್ ಎಂಬವರನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿವಸಗಳ ಕಾಲ ಪೊಲೀಸರ ವಶಕ್ಕೊಪ್ಪಿಸಲಾಗಿದೆ.
ಆರೋಪಿಗಳನ್ನು ಮಾ. 20ರಂದು ಮಂಜೇಶ್ವರದ ವಸತಿಗೃಹವೊಮದರಿಂದ ಮರಕ ಎಂಡಿಎಂಎ ಹಾಗೂ 7.22 ಲಕ್ಷ ರೂ ವಶಪಡಿಸಿಕೊಳ್ಳಲಾಗಿತ್ತು. ಬೆಳ್ತಂಗಡಿ ನಿವಾಸಿ ಮಹಮ್ಮದ್ ಮನ್ಸುರ್‍ಗೆ ಅಂತಾರಾಜ್ಯ ಮಾದಕ ದ್ರವ್ಯ ಸಾಗಾಟ ತಂಡದೊಂದಿಗೆ ಸಂಪರ್ಕ ಹೊಂದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಹಲವು ಮಂದಿ ಪ್ರಮುಖರಿಗೆ ಈ ತಂಡ ಮಾದಕ ದ್ರವ್ಯ ಪೂರೈಸುತ್ತಿದ್ದು, ತಂಡವನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದಲ್ಲಿ ಮತ್ತಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ ಎಂದುಪೊಲೀಸರು ತಿಳಿಸಿದ್ದಾರೆ.




