ಕಾಸರಗೋಡು: ಬಿಎಂಎಸ್ ಕಾಸರಗೊಡು ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಕೀಲ ಪಿ. ಸುಹಾಸ್(38)ಅವರ ಸಂಸ್ಮರಣಾ ಸಮಾರಂಭ ಬಿಎಂಎಸ್ ಜಿಲ್ಲಾ ಕಚೇರಿ ವಠಾರದಲ್ಲಿ ಜರುಗಿತು. ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ವಕೀಲ ಪಿ. ಮುರಳೀಧರನ್ ಸಂಸ್ಮರಣಾ ಭಾಷಣ ಮಾಡಿದರು.
ಆರ್‍ಎಸ್‍ಎಸ್ ಜಿಲ್ಲಾ ಸಹ-ಸಂಪರ್ಕ ಪ್ರಮುಖ್ ಸುನಿಲ್ ಕುದುರೆಪಾಡಿ, ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿಗಳಾದ ದಿನೇಶ್ ಬಂಬ್ರಾಣ, ಹರೀಶ್ ಕುದುರೆಪಾಡಿ, ಅನಿಲ್ ಬಿ ನಾಯರ್, ಟಿ.ಕೃಷ್ಣನ್, ಎ.ಕೇಶವ, ಬಾಬುಮೋನ್, ಜಯಶೀಲನ್, ಬಾಲಕೃಷ್ಣ ನೆಲ್ಲಿಕುನ್ನು, ಮನೋಜ್ ಉಪಸ್ಥಿತರಿದ್ದರು. 2008 ಏ. 17ರಂದು ವಕೀಲ ಪಿ.ಸುಹಾಸ್ ಅವರನ್ನು ಮಾರಕಾಯುಧಗಳೊಂದಿಗೆ ಸುತ್ತುವರಿದ ತಂಡ ಬರ್ಬರವಾಗಿ ಕಡಿದು ಕೊಲೆಗೈದಿತ್ತು.





