ಕಾಸರಗೋಡು : ಗಡಿನಾಡಿನ ಕನ್ನಡ ಉಳಿಸುವ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಕನ್ನಡ ಭವನ ಕೇಂದ್ರ ಸಮಿತಿ ವತಿಯಿಂದ ಕೊಡಮಾಡುವ 'ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಉದ್ಯಮಿ ಶ್ರೀಪತಿ ಭಟ್ ಮೂಡುಬಿದಿರೆ ಮತ್ತು ಪತ್ರಿಕಾ ಸಂಪಾದಕ ಕೊಡತ್ತೂರು ಭುವನಾಭಿರಾಮ ಉಡುಪ ಆಯ್ಕೆಯಾಗಿದ್ದಾರೆ.
ಏ.18ರಂದು ಮಧ್ಯಾಹ್ನ 2ಗಂಟೆಗೆ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿರುವುದಾಗಿ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ ವಾಮನರಾವ್ ಬೇಕಲ್ ಮತ್ತು ಕಾರ್ಯದರ್ಶಿ ವಸಂತ ಕೆರೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





