ಅಹಮದಾಬಾದ್: ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ವಲಸೆ ಬಂದಿರುವ 1,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿರುವ ಗುಜರಾತ್ ಪೊಲೀಸರು, ಅವರನ್ನು ಗಡೀಪಾರು ಮಾಡುವ ನಿಟ್ಟಿನಲ್ಲಿ ಯತ್ನ ನಡೆಸಿದ್ದಾರೆ.
'ಅಹಮದಾಬಾದ್‌ನಲ್ಲಿ 890 ಮತ್ತು ಸೂರತ್‌ನಲ್ಲಿ 134 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದು ಗುಜರಾತ್ ಪೊಲೀಸರು ಇಲ್ಲಿಯವರೆಗೆ ನಡೆಸಿರುವ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ' ಎಂದು ಗುಜರಾತಿನ ಗೃಹ ಸಚಿವ ಹರ್ಷ ಸಾಂಘವಿ ಶನಿವಾರ ಮಾಹಿತಿ ನೀಡಿದರು.
ಗುಜರಾತಿನಲ್ಲಿ ಅಕ್ರಮವಾಗಿ ನಲೆಸಿರುವ ಬಾಂಗ್ಲಾದೇಶದ ಇತರೆ ವಲಸಿಗರು ಪೊಲೀಸರ ಬಳಿ ಶರಣಾಗುವಂತೆ ಸಚಿವರು ಕರೆ ನೀಡಿದರು. ಇಲ್ಲದಿದ್ದರೆ ಅವರನ್ನು ಬಂಧಿಸಿ, ಗಡೀಪಾರು ಮಾಡಲಾಗುವುದು ಎಂದು ಎಚ್ಚರಿಸಿದರು.
'ಅಲ್ಲದೆ ಅಕ್ರಮ ವಲಸಿಗರಿಗೆ ನೆಲೆ ಒದಗಿಸಿ ನೆರವಾಗುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದೂ ಸಚಿವರು ಎಚ್ಚರಿಕೆ ನೀಡಿದರು.
'ವಶಕ್ಕೆ ಪಡೆಯಲಾಗಿರುವ ಅಕ್ರಮ ವಲಸಿಗರನ್ನು ಆದಷ್ಟು ಬೇಗ ಗಡೀಪಾರು ಮಾಡಲಾಗುವುದು. ಅಕ್ರಮ ವಲಸಿಗರು ಗುಜರಾತ್ ಸೇರಿದಂತೆ ದೇಶದ ವಿವಿಧೆಡೆ ಹೋಗುವುದಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿ ನಕಲಿ ದಾಖಲಾತಿಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಅವರ ನಕಲಿ ದಾಖಲಾತಿಗಳ ಬಗ್ಗೆಯೂ ತನಿಖೆ ನಡೆ




