HEALTH TIPS

ಬಾಹ್ಯಾಕಾಶ ಕೇಂದ್ರ ತಲುಪಿದ ಅಮೆರಿಕ-ರಷ್ಯಾದ ಗಗನಯಾತ್ರಿಗಳು

ಮಾಸ್ಕೊ/ಬೈಕ್‌ನೂರ್‌ (ರಾಯಿಟರ್ಸ್/ಎಪಿ): ನಾಸಾದ ಜಾನಿ ಕಿಮ್‌ ಮತ್ತು ರಷ್ಯಾದ ಇಬ್ಬರು ಗಗನಯಾತ್ರಿಗಳು ರಷ್ಯಾದ ಬಾಹ್ಯಾಕಾಶ ನೌಕೆ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಯಶಸ್ವಿಯಾಗಿ ತಲುಪಿದ್ದಾರೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೊಸ್‌ಕೋಸ್ಮೋಸ್‌ ಮಂಗಳವಾರ ಹೇಳಿದೆ.

ಉಡಾವಣೆಯಾದ ಮೂರು ಗಂಟೆಗಳಲ್ಲಿ ಬಾಹ್ಯಾಕಾಶ ಕೇಂದ್ರವನ್ನು ತಲುಪಿರುವ ಕಿಮ್‌ ಮತ್ತು ರಷ್ಯಾದ ಸೆರ್ಗೇಯ್‌ ರಿಝಿಕೋವ್ ಮತ್ತು ಅಲೆಕ್ಸಿ ಝುಬ್ರಿತಟ್ಸ್‌ಕಿ ಅವರು 8 ತಿಂಗಳು ಅಲ್ಲೇ ವಾಸ ಮಾಡಲಿದ್ದಾರೆ.

ಮೂವರನ್ನು ಹೊತ್ತಿದ್ದ 'ಸೋಯುಜ್‌ ಎಮ್‌ಎಸ್‌-27' ನೌಕೆ ಇರುವ 'ಸೋಯುಜ್' ರಾಕೆಟ್‌ ಅನ್ನು ಕಜಕಿಸ್ತಾನದಲ್ಲಿ ರಷ್ಯಾ ಗುತ್ತಿಗೆ ಪಡೆದಿರುವ ಬೈಕ್‌ನೂರ್‌ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.

'ಮುಂದಿನ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಸುಗಮಗೊಳಿಸುವ ಮತ್ತು ಭೂಮಿಯಲ್ಲಿನ ಜನರ ಉಪಯೋಗದ ಉದ್ದೇಶದಿಂದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಯೋಗಗಳನ್ನು ಕಿಮ್ ನಡೆಸಲಿದ್ದಾರೆ' ಎಂದು ನಾಸಾ ಹೇಳಿದೆ.

ಗಗನಯಾನ ಆರಂಭಿಸಿರುವ ನಾಸಾದ ಗಗನಯಾತ್ರಿ ಜಾನಿ ಕಿಮ್‌ ರಷ್ಯಾದ ಸೆರ್ಗೇಯ್‌ ರಿಝಿಕೋವ್ ಮತ್ತು ಅಲೆಕ್ಸಿ ಝುಬ್ರಿತಟ್ಸ್‌ಕಿ -ಎಎಫ್‌ಪಿ ಚಿತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries