ಮಾಸ್ಕೊ : ರಷ್ಯಾ ರಾಜಧಾನಿ ಮಾಸ್ಕೊ ಪ್ರದೇಶದ ಬಾಲಶಿಖಾ ಪಟ್ಟಣದಲ್ಲಿ ಶುಕ್ರವಾರ ಕಾರು ಸ್ಫೋಟಗೊಂಡು ಹಿರಿಯ ಸೇನಾ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ರಷ್ಯಾದ ಸಶಸ್ತ್ರ ಪಡೆಗಳ ಜನರಲ್ ಸಿಬ್ಬಂದಿಯ ಮುಖ್ಯ ಕಾರ್ಯಾಚರಣೆ ನಿರ್ದೇಶನಾಲಯದ ಉಪ ಮುಖ್ಯಸ್ಥ ಯರೊಸ್ಲಾವ್ ಮೊಸ್ಕಾಲಿಕ್ ಮೃತ ಅಧಿಕಾರಿ ಎಂದು 'ಮ್ಯಾಶ್' ಮತ್ತು 'ಶಾಟ್' ಸುದ್ದಿಸಂಸ್ಥೆಗಳು ವರದಿ ಮಾಡಿದೆ.
ಕಾರಿನಲ್ಲಿ ಬಾಂಬ್ ಇರಿಸಿ ರಿಮೊಟ್ ನೆರವಿನಿಂದ ಸ್ಫೋಟಿಸಲಾಗಿದೆ. ಕಾರು ಸಮೀಪ ನಡೆದು ಹೋಗುತ್ತಿದ್ದ ಸೇನಾಧಿಕಾರಿ ಹತರಾಗಿದ್ದಾರೆ ಎಂದು ಮತ್ತೊಂದು ಸುದ್ದಿಮಾಧ್ಯಮ ವರದಿ ಮಾಡಿದೆ.




