ನೀವೀಗ ಎಲ್ಲಾ ಹಣದ ಮೇಲೆ ಅಳೆಯುವ ದಿನಗಳ ನೋಡುತ್ತಿದ್ದೀರಿ. ಅಂದರೆ ಹಿಂದೆ ಉಚಿತ ಬಳಕೆಯಾಗುತ್ತಿದ್ದ ವಸ್ತುಗಳು ಕೂಡ ಈಗ ಹಣ ನೀಡಿ ಖರೀದಿಸುವ ಕಾಲವಾಗಿ ಬದಲಾಗಿದೆ. ಈಗ ಒಂದು ಲೀಟರ್ ನೀರಿಗೆ 20 ರೂಪಾಯಿಯಿಂದ ಹಿಡಿದು ಸಾವಿರಾರು ರೂಪಾಯಿ ನೀಡಬೇಕಿರುವುದು ಇದಕ್ಕೆ ಉದಾಹರಣೆ ಎನ್ನಬಹುದು. ಹಾಗೆ ಬಹಳ ಕಾಲದಿಂದ ನೈಸರ್ಗಿಕವಾಗಿ ಸಿಗುತ್ತಿದ್ದ ಹಲವು ವಸ್ತುಗಳು ಮಾರುಕಟ್ಟೆಗೆ ತಲುಪಿವೆ.
ಈಗ ಮುಂದೆ ಭಾರತದಲ್ಲಿ ದೊಡ್ಡ ಸ್ಕ್ಯಾಮ್ ಒಂದು ನಡೆಯಲಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ನೀರಿನ ವಿಚಾರವು ಮುಂದೆ ಭಾರತದಲ್ಲಿ ದೊಡ್ಡ ಸ್ಕ್ಯಾಮ್‌ಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ ಈಗಾಗಲೇ ನಾವು ಅಗತ್ಯಕ್ಕಿಂತ ಹೆಚ್ಚಿನ ದರ ನೀಡಿ ನೀರನ್ನು ಖರೀದಿ ಮಾಡುವ ಸ್ಥಿತಿಗೆ ಬಂದಿದ್ದೇವೆ. ಆದ್ರೆ ಮುಂದೆ ಇರುವ ದೊಡ್ಡ ಮೋಸ ಅಥವಾ ವಂಚನೆ ಜಾಲ ನೋಡಿದರೆ ನಿಮಗೆ ಆಘಾತ ಆಗಬಹುದು.
ಸದ್ಯ ಈಗ ವಿಶ್ವದಲ್ಲಿ ಅಲ್ಕಾಲೈನ್ ವಾಟರ್ ಹೆಚ್ಚು ಸುದ್ದಿಯಲ್ಲಿರುವ ವಸ್ತು. ಅಂದರೆ ಅಲ್ಕಾಲೈನ್ ವಾಟರ್ ಎಂಬುದು ಮುಂದೆ ಭಾರತೀಯರನ್ನು ಮೋಸದ ಬಲೆಯಲ್ಲಿ ಬೀಳಿಸಲಿದೆ ಎನ್ನಲಾಗಿದೆ. ಅಲ್ಕಾಲೈನ್ ವಾಟರ್ ಅಂದರೆ ಪರಿಶುದ್ಧ ನೀರು ಎನ್ನಬಹುದು. ನೀವು ಕುಡಿಯುವ ಬಾಟಲ್ ನೀರಿಗಿಂತ ಇದು 100 ಪಟ್ಟು ಉತ್ತಮ ಎಂಬ ವಾದವಿದೆ. ಈ ಅಲ್ಕಾಲೈನ್ ವಾಟರ್ 7ರ ಮಟ್ಟದ pH ಲೆವೆಲ್ ಹೊಂದಿರಲಿದೆ. ಹೀಗಾಗಿ ಇದು ಆರೋಗ್ಯಕ್ಕೆ ಬಹಳ ಉತ್ತಮ ಎಂದು ಈಗಾಗಲೇ ವಿದೇಶದಲ್ಲಿ ಚಾಲ್ತಿಯಲ್ಲಿದೆ. ಏಕೆಂದರೆ ನಮ್ಮ ರಕ್ತದ pH ಲೆವಲ್ ಕೂಡ 7 ರ ಆಸುಪಾಸಿನಲ್ಲಿದೆ. ಇದೇ ಲೆವೆಲ್ pH ಫುಡ್ ಸೇವಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತೆ ಎಂಬ ಕಲ್ಪನೆಯನ್ನು ಈಗ ಜನರಲ್ಲಿ ಮೂಡಿಸಲಾಗುತ್ತಿದೆ. ಆದರೆ ಇದು ಭಾರತಕ್ಕೆ ಬಂದರೆ ಈ ನೀರಿಗೆ ದುಬಾರಿ ಹಣ ನೀಡುವ ಜೊತೆಗೆ ಇದನ್ನು ಪ್ರತಿಷ್ಠೆ ಎನ್ನುವಂತೆ ಬಿಂಬಿಸಿ ಹತ್ತಾರು ಕಂಪನಿಗಳು ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡೋದ್ರಲ್ಲಿ ಯಾವ ಅನುಮಾನವೂ ಇಲ್ಲ.
ಆದ್ರೆ ಇಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಇದು ಹೇಗೆ ಜನರನ್ನು ಮೋಸ ಮಾಡಲಿದೆ ಎಂಬುದನ್ನು ವಿವರಿಸಲಾಗಿದೆ. ವೀಡಿಯೊದಲ್ಲಿ ಮಹಿಳೆಯೊಬ್ಬರು ಶೀಘ್ರದಲ್ಲೇ ಭಾರತವನ್ನು ಪ್ರವೇಶಿಸಲಿರುವ ದೊಡ್ಡ ಹಗರಣ ಬರುತ್ತಿದೆ ಎಂದು ಹೇಳಿಕೊಳ್ಳುತ್ತಾರೆ. ಅಲ್ಕಾಲೈನ್ ವಾಟರ್ ಅಂದರೆ 7 ಕ್ಕಿಂತ ಹತ್ತಿರವಿರುವ pH ಹೊಂದಿರುವ ಯಾವುದೇ ವಸ್ತು. 7 ಕ್ಕಿಂತ ಕಡಿಮೆ ಇರುವ ಯಾವುದೇ ವಸ್ತು ಆಮ್ಲೀಯ ವಸ್ತು ಎಂದು ಪರಿಗಣಿಸಲಾಗಿದೆ. ಇದು ದೇಹಕ್ಕೆ ಉತ್ತಮವಲ್ಲ ಎಂಬ ನಂಬಿಕೆಯೂ ಇದೆ ಎಂದು ಆಕೆ ವಿವರಿಸುತ್ತಾರೆ.
ವಿದೇಶದಲ್ಲಿ ಈ ಆಲ್ಕಾಲೈನ್ ವಾಟರ್ ಕುಡಿಯುವ ಹವ್ಯಾಸ ಆರಂಭಗೊಂಡಿದೆ. ಭಾರತದಲ್ಲಿ ಪ್ರತಿ ಲೀಟರ್ ನೀರಿಗೆ ಇದು ಸಾವಿರಾರು ರೂಪಾಯಿ ಆಗಲಿದೆ. ಒಂದು ವೇಳೆ ಜನರಿಗೆ ಈ ಕುರಿತು ಅರಿವಿಲ್ಲದೆ ಇದ್ದರೆ ಖಂಡಿತ ಇದು ಜನರ ಜೇಬನ್ನು ಸುಡಲಿದೆ. ನಾವು ಎಷ್ಟೇ pH ಪ್ರಮಾಣದ ನೀರು ಕುಡಿದರೂ ಅದು ಹೊಟ್ಟೆಗೆ ಸೇರುತ್ತದೆ. ಹೊಟ್ಟೆಯಲ್ಲಿರುವ ಆಮ್ಲವು ಸುಮಾರು 1 ರಿಂದ 1.5 pH ಲೆವೆಲ್ ಹೊಂದಿದೆ. ಅಂದರೆ ಒಂದು ವಾಹನದ ಬ್ಯಾಟರಿಯೊಳಗಿನ ಆಮ್ಲಕ್ಕೆ ಹೋಲಿಸಬಹುದು, ಇಷ್ಟು ಪ್ರಮಾಣದ pHನೊಂದಿಗೆ ಯಾವುದೇ ವಸ್ತು ಸೇರಿದರೆ ಅದರ pH ಸಹ ಬದಲಾಗುತ್ತದೆ. ಆದ್ರೆ ನಮ್ಮ ದೇಹ ಹೆಚ್ಚು pH ಲೆವೆಲ್ ಅನ್ನು ನಿಭಾಯಿಸಿ ದೇಹಕ್ಕೆ ಅಗತ್ಯ ಇರುವಷ್ಟು pH ಅನ್ನು ನಿಯಂತ್ರಿಸುತ್ತದೆ. ಹೀಗಾಗಿ ನೀವು ಸೇವಿಸುವ ಆಹಾರ ಹಾಗೂ ನೀರಿನ pH ಲೆವೆಲ್ ಕುರಿತಂತೆ ಯಾವುದೇ ಆತಂಕ ಅನುಮಾನ ಇಡುವುದು ಉಚಿತವಲ್ಲ.
pH ಎಂದರೇನು?
pH ನ ಪೂರ್ಣ ರೂಪ ಪೊಟ್ಯಾನ್ಷಿಯಲ್ ಆಫ್ ಹೈಡ್ರೋಜನ್. ಆಹಾರದಲ್ಲಿ ಎಷ್ಟು ಪ್ರಮಾಣದ ಪೊಟ್ಯಾನ್ಷಿಯಲ್ ಆಫ್ ಹೈಡ್ರೋಜನ್ ಇದೆ ಎಂಬುದನ್ನು ಸೂಚಿಸುವ ಇಂದು ಮಾಪನವಾಗಿದೆ. ಒಂದು ವಸ್ತು ಅಥವಾ ದ್ರಾವಣವು ಎಷ್ಟು ಆಮ್ಲೀಯ ಅಥವಾ ಮೂಲಭೂತವಾಗಿದೆ ಎಂಬುದರ ಅಳತೆ ಇದಾಗಿದೆ. pH ಅನ್ನು 0 ರಿಂದ 14 ರವರೆಗಿನ ಪ್ರಮಾಣದಲ್ಲಿ ಅಳೆಯಲಾಗುತ್ತದೆ. 7 ರ pH ಮೌಲ್ಯವು ತಟಸ್ಥ ಎಂದು ತೋರಿಸಲಿದೆ. ಹಾಗೆ 7ಕ್ಕಿಂತ ಕಡಿಮೆ ಇರುವ pH ಮೌಲ್ಯವು ಹೆಚ್ಚು ಆಮ್ಲೀಯವಾಗಿದೆ ಎಂದರ್ಥ.






