ಮಂಜೇಶ್ವರ:ಕಾಸರಗೋಡು ಜಿಲ್ಲಾ ಕುಲಾಲ ಸಂಘ(ರಿ.) ಮಂಜೇಶ್ವರ.ತೂಮಿನಾಡು ಇದರ 6 ನೇ ಕುಲಾಲ ಆಸರೆ ಯೋಜನೆ ಸಹಾಯ ಹಸ್ತ ರೂ. 20,000( ಇಪತ್ತು ಸಾವಿರ ರೂ.) ಮೊತ್ತವನ್ನು ಬಾಯಿಯ ಅರ್ಬುದ ರೋಗದ ಚಿಕಿತ್ಸೆಗಾಗಿ ವರ್ಕಾಡಿ ತಮ್ಮನ ಬೆಟ್ಟಿನ ಕಿರಣ್ ಕುಲಾಲ್ ಅವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ವಕೀಲ ರವೀಂದ್ರ ಮುನ್ನಿಪ್ಪಾಡಿ, ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಕುಲಾಲ ಸಂಘ ವರ್ಕಾಡಿ ಶಾಖೆಯ ಅಧ್ಯಕ್ಷ ಕೇಶವ ಕೊಡ್ಲಮೊಗರು, ಶಾಖೆಯ ಕಾರ್ಯದರ್ಶಿ ಭಾಸ್ಕರ ಮಡ್ವ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಧೀರ್ ರಂಜನ್ ಕೆ. ದೈಗೋಳಿ, ಸುಧೀರ್ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.




.jpg)
