HEALTH TIPS

ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಬಗ್ಗೆ ಎಚ್ಚರವಿರಲಿ: ನಾಗರಿಕ ಸೇವಕರಿಗೆ ಮಾರ್ಗಸೂಚಿ

ನವದೆಹಲಿ: ಉಡುಗೊರೆಗಳು, ಆತಿಥ್ಯ ಮತ್ತು ಉಚಿತ ಪ್ರಚಾರ ಸೇರಿದಂತೆ ವಿವಿಧ ಬಗೆಯ ಆಮಿಷಗಳನ್ನು ತಿರಸ್ಕರಿಸಬೇಕು ಎಂದು ನಾಗರಿಕ ಸೇವೆಗೆ ಇತ್ತೀಚೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಸ್ಸೂರಿ ಮೂಲದ ಲಾಲ್‌ ಬಹದ್ದೂರ್‌ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ ಶುಕ್ರವಾರ ಮಾರ್ಗಸೂಚಿ ಹೊರಡಿಸಿದೆ.

'ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳು ತಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ದೇಶದ ನಾಗರಿಕ ಸೇವಕರಾಗಿ ಆಯ್ಕೆಯಾಗಿರುವ ನಿಮ್ಮಗಳ ನಡವಳಿಕೆಯು ನಿರಂತರವಾಗಿ ಸಾರ್ವಜನಿಕರ ಪರಿಶೀಲನೆಗೆ ಒಳಪಟ್ಟಿರುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಎಚ್ಚರವಹಿಸಿರಿ' ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

'ಸಾರ್ವಜನಿಕರು, ಜನಪ್ರತಿನಿಧಿಗಳು, ಕಾರ್ಪೊರೇಟ್‌ ಸಂಸ್ಥೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಸರ್ಕಾರಿ ಸಿಬ್ಬಂದಿ, ಇತರ ಗಣ್ಯರು ಮತ್ತು ಸಮಾಜದ ದುರ್ಬಲ ವರ್ಗಗಳ ಜತೆ ನಿಮ್ಮ ವೈಯಕ್ತಿಕ, ಅಧಿಕೃತ ಮತ್ತು ಸಾಮಾಜಿಕ ಸಂಪರ್ಕವು ವಿನಯಶೀಲ, ಗೌರವಾನ್ವಿತ ಮತ್ತು ಘನತೆಯಿಂದ ಕೂಡಿರಬೇಕು' ಎಂದು ತಿಳಿಸಲಾಗಿದೆ.

2024ರ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು ಉದ್ದೇಶಿಸಿ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ. ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries