ಕಾಸರಗೋಡು: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಂಟಿಯಾಗಿ ಚಂಡಮಾರುತ ಮತ್ತು ಸಂಬಂಧಿತ ವಿಪತ್ತು ಸಿದ್ಧತೆಯನ್ನು ನಿರ್ಣಯಿಸುವ ನಿಟ್ಟಿನಲ್ಲಿ ಕಲ್ಪಿತ ಕಾರ್ಯಾಚರನೆಯನ್ನು ಆಯೋಜಿಸಲಾಯಿತು. ರಾಜ್ಯದಾದ್ಯಂತ 12 ಜಿಲ್ಲೆಗಳ 24 ಆಯ್ದ ಕೇಂದ್ರಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾಸರಗೋಡು ಜಿಲ್ಲೆಯ ಮಡಕ್ಕರ ಬಂದರು ಮತ್ತು ಕೊಟ್ಟೋಡಿ ನಗರದಲ್ಲಿ ಈ ಕವಾಯತು ಆಯೋಜಿಸಲಾಗಿತ್ತು. ವಿಪತ್ತು ಪ್ರತಿಕ್ರಿಯೆ ಸನ್ನದ್ಧತೆಯಲ್ಲಿ ಅಣಕು ಕವಾಯತುಗಳು ನಿರ್ಣಾಯಕ ವ್ಯಾಯಾಮಗಳು.
ಚಂಡಮಾರುತ, ನೆರೆ ಸೇರಿದಂತೆ ವಿಪತ್ತು ನಿರ್ವಹಣೆ ಬಗ್ಗೆ ಸಂಬಂಧಪಟ್ಟ ವ್ಯವಸ್ಥೆಗಳನ್ನು ಯಾವ ರೀತಿ ಸಜ್ಜುಗೊಳಿಸಲಾಗಿದೆ ಎಂಬುದನ್ನು ಪರೀಕ್ಷಿಸಲು ಮತ್ತು ಅದನ್ನು ಮತ್ತಷ್ಟು ಸುಧಾರಿಸುವುದರೊಂದಿಗೆ ನ್ಯೂನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕಲ್ಪಿತ ಕಾರ್ಯಾಚರಣೆ ಆಯೋಜಿಸಲಾಗುತ್ತಿದೆ. ಕಲ್ಪಿತ ಕಾರ್ಯಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಚೆರ್ವತ್ತೂರಿನ ಎಫ್‍ವಿಎಚ್‍ಎಸ್‍ಎಸ್ ಶಾಲೆಯಲ್ಲಿ ಸಜ್ಜುಗೊಳಿಸಲಾದ ಕೇಂದ್ರದಲ್ಲಿ ಸೈರನ್ ಅಳವಡಿಕೆಯೊಂದಿಗೆ ಕಾರ್ಯಾಚರಣೆ ಅರಂಭಿಸುತ್ತಿದ್ದಂತೆ ಜನತೆ ಏಕಾಏಕಿ ಭಯಭೀತಿಗೊಳಗಾಗಿದ್ದು, ನಂತರ ಕಲ್ಪಿತ ಕಾರ್ಯಾಚರಣೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟರು. ವಿಪತ್ತು ನಿವಾರಣೆ ಬಗ್ಗೆ ನಡೆದ ಕಲ್ಪಿತ ಕಾರ್ಯಾಚರಣೆಯಲ್ಲಿ ದುರಂತ ಸಂಭವಿಸುವ ಸಂದರ್ಭ ಜನತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಮಾಃಇತಿ ನೀಡಲಾಯಿತು.





