ಮಂಜೇಶ್ವರ: ಮಂಜೇಶ್ವರ ಪೆÇೀಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಪಂಚಾಯಿತಿಯ ಬಾಕ್ರಬೈಲು ಎಂಬಲ್ಲಿ ಗುಂಡೇಟು ತಗುಲಿ, ಬಾಕ್ರಬೈಲು ನಿವಾಸಿ ಸವಾದ್ ಎಂಬವರು ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ತಡ ರಾತ್ರಿ ಬಾಕ್ರಬೈಲಿನಲ್ಲಿರುವ ಇವರ ಮನೆಯ ಸಮೀಪದ ಗುಡ್ಡದಲ್ಲಿ ಬೆಳಕು ಕಾಣುತ್ತಿರುವುದು ಗಮನಿಸಿದ ಸವಾದ್ ತನ್ನ ಕೆಲವು ಸನೇಹಿತರ ಜತೆ ಅತ್ತ ತೆರಳುತ್ತಿದ್ದ ಸಂದರ್ಭ ಏಕಏಕಿ ಗುಂಡೇಟು ತಗುಲಿದೆ. ಇವರ ತೊಡೆಯ ಭಾಗಕ್ಕೆ ಗುಂಡೇಟು ತಗುಲಿದ್ದು, ಚೇತರಿಸುತ್ತಿದ್ದಾರೆ. ಘಟನೆ ಬಗ್ಗೆ ಡಿವೈಎಸ್‍ಪಿ ಸಿ.ಕೆ ಸುನಿಲ್ ನೇತೃತ್ವದ ಪೊಲೀಸರ ತಂಡ ಸತಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದು, ಈ ಸಂದರ್ಭ ಇಲಿ ಸಎರೆಹಿಡಿಯುವ ಕತ್ತರಿಗೆ ಕಬ್ಬಿಣದ ಪೈಪು ಅಳವಡಿಸಿ ಬಂದೂಕು ರೀತಿಯಲ್ಲಿ ತಯಾರಿಸಿದ ಸಲಕರಣೆ ಮರಕ್ಕೆ ಅಳವಡಿಸಿರುವುದನ್ನು ಪತ್ತೆಹಚ್ಚಲಾಗಿತ್ತು. ಈ ಪ್ರದೇಶದಲ್ಲಿ ಕಾಡುಹಂದಿ ಸೆರೆಹಿಡಿಯಲು ವ್ಯಾಪಕವಾಗಿ ಕುಣಿಕೆ ಇರಿಸಲಾಗುತ್ತಿದ್ದು, ಪೊಲೀಸರು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿದ್ದರು. ಕಾಡುಹಂದಿ ಸೇರಿದಂತೆ ಕಾಡುಪ್ರಾಣಿಗಳನ್ನು ಸೆರೆಹಿಡಿಯಲು ಈ ಸಲಕರಣೆ ಅಳವಡಿಸಿರಬೇಕೆಂದು ಸಂಶಯಿಸಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.





