ಮಂಜೇಶ್ವರ: ವರ್ಕಾಡಿಯ ಶ್ರೀಮಾತಾ ಚಾರಿಟೇಬಲ್ ಟ್ರಸ್ಟ್ ( ರಿ) ಮತ್ತು ಶ್ರೀಮಾತಾ ಸೇವಾಶ್ರಮದ ದಶಮಾನೋತ್ಸವ ಸಮಾರಂಭ ವಿವಿಧ ಕಾರ್ಯಕ್ರಮದೊಂದಿಗೆ ಜರುಗಿತು. ವಿವಿಧ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಸಂಕೀರ್ತನೆ ನಡೆಯಿತು. ಪುರೋಹಿತ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಿತು. ಬೆಳಗ್ಗೆ ಗಣಪತಿ ಹೋಮ ನಂತರ ಚಂಡಿಕಾ ಯಾಗ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದೈಗೋಳಿ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಸಂಚಾಲಕಿ ಡಾ. ಶಾರದಾ ಉದಯಕುಮಾರ್ ಸಮಾರಂಭ ಉದ್ಘಾಟಿಸಿದರು. ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆ ನಿವೃತ್ತ ಪ್ರಾಂಶುಪಾಲ ಚಂದ್ರ ಕುಮಾರ್ ಕೆ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರಭಾಕರ್ ಭಟ್ ಕಲ್ಲಡ್ಕ ದಿಕ್ಸೂಚಿ ಭಾಷಣಗೈದು, ಹಿಂದೂ ಸಮಾಜ ಮತ್ತು ಈ ಪುಣ್ಯಭೂಮಿ ಭಾರತ ಉಳಿಯಬೇಕಾದರೆ ಹಿಂದೂಗಳು ಕನಿಷ್ಠಪಕ್ಷ ಮೂರು ಮಕ್ಕಳನ್ನು ಹೊಂದಬೇಕು. ನಮ್ಮ ಹೆಣ್ಮಕ್ಖಳಿಗೆ ಸಮಾಜದಲ್ಲಿ ಅತಂತ್ರ ಸ್ಥಿತಿ ಕಾಡಲಾರಂಭಿಸಿದೆ. ಆತ್ಮರಕ್ಷಣೆ ಕಲೆಯನ್ನು ಹೆಣ್ಮಕ್ಕಳು ಬಾಲ್ಯದಿಂದಲೇ ಕಲಿತುಕೊಳ್ಳಬೇಕು. ಸಂಜೆಯಾದಲ್ಲಿ ಮನೆಯಿಂದ ಹೊರತೆರಳುವುದೇ ಸವಾಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹೆಣ್ಮಕ್ಕಳು ತಮ್ಮ ಆತ್ಮರಕ್ಷಣೆಗೆ ಆರು ಇಂಚಿನ ಚಾಕುವನ್ನು ಜತೆಗಿರಿಸಿಕೊಳ್ಳುವುದೂ ಅನಿವಾರ್ಯ. ನಮ್ಮ ಮಕ್ಕಳಿಗೆ ಹಿಂದು ಸಂಸ್ಕøತಿ ಸಂಪ್ರದಾಯದ ಬಗ್ಗೆ ಜ್ಞಾನ ಕೊಡುವಂತಹ ಶಾಲೆಗಳಲ್ಲಿಯೇ ಶಿಕ್ಷಣವನ್ನು ಕೊಡಿಸಬೇಕು. ನಮ್ಮ ವ್ಯವಹಾರವು ಲಾಭವಾಗಲಿ ನಷ್ಟವಾಗಲಿ ನಮ್ಮ ಸಮಾಜದವರಲ್ಲೇ ಮಾಡಬೇಕು ಎಂದು ಎಚ್ಚರಿಕೆಯ ಸಂದೇಶ ನೀಡಿದರು.
ಸಮಾಜಕ್ಕೆ ನಾವೇನು ಮಾಡಬೇಕು ಎಂಬ ಚಿಂತನೆಯೊಂದಿಗೆ ಜೀವನದಲ್ಲಿ ಸಮಾಜಕ್ಕೆ ತನ್ನಿಂದಾಗುವ ಸೇವೆಯನ್ನು ನೀಡಿದರೆ ಅದುವೇ ಸರ್ವ ಶ್ರೇಷ್ಠ ಜೀವನವಾಗುವುದು. ಈ ನಿಟ್ಟಿನಲ್ಲಿ ಶ್ರೀಮಾತಾ ಸೇವಾಶ್ರಮ ನಡೆಸುತ್ತಿರುವ ಕಾರ್ಯ ಶ್ಲಾಘನೀಯ. ನಮ್ಮ ಮಕ್ಕಳಿಗೆ ಸಂಸ್ಕøತಿ ಸಂಪ್ರದಾಯದ ಬಗ್ಗೆ ಜ್ಞಾನ ಕೊಡುವಂತಹ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸುವಂತಾಗಬೇಕು ಎಂದು ತಿಳಿಸಿದರು.
ಎಸ್.ಎನ್ ಕಡಂಬಾರು, ವೀರಪ್ಪ ಅಂಬಾರ್ ಉಪ್ಪಳ, ಮೀರಾ ಆಳ್ವ, ದಶಮಾನೋತ್ಸವ ಸಮಿತಿ ಅಧ್ಯಕ್ಷ ರವಿ ಮುಡಿಮಾರ್ ಮೊದಲದವರು ಉಪಸ್ಥಿತರಿದ್ದರು. ಆಶ್ರಮದ ಟ್ರಸ್ಟಿನ ಅಧ್ಯಕ್ಷ ಟಿ .ನಾರಾಯಣ ಭಟ್ ತಲೆಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪುಷ್ಪ ಮನೋಹರ್ ಶೆಟ್ಟಿ ಕೆದುಂಬಾಡಿ ವರದಿ ಮಂಡಿಸಿದರು. ಅಶೋಕ್ ಮಾಸ್ಟರ್ ಬಾಡೂರು ಕಯ್ಕ್ರಮ ನಿರೂಪಿಸಿದರು. ಯತಿರಾಜ್ ಶೆಟ್ಟಿ ವಂದಿಸಿದರು.





