ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ರಾಜಾ ಇಕ್ಬಾಲ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮನ್‌ದೀಪ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಬಿಜೆಪಿ ಎರಡು ವರ್ಷಗಳ ಬಳಿಕ ಪಾಲಿಕೆಯ ಗದ್ದುಗೆಯನ್ನು ಏರಿದೆ. ಅಮ್ ಆದ್ಮಿ ಪಕ್ಷವು (ಎಎಪಿ) ಮೇಯರ್ ಚುನಾವಣೆಯನ್ನು ಬಹಿಷ್ಕರಿಸಿತ್ತು.
ರಾಜಾ ಇಕ್ಬಾಲ್ ಅವರು ಈ ಹಿಂದೆ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಮತ್ತು ಉತ್ತರ ಪಾಲಿಕೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು.




