ಕಾಸರಗೋಡು: ಅಡ್ಕತ್ತಬೈಲ್ ಹೊಸಮನೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಪುನ:ಪ್ರತಿಷ್ಠಾ ವಾರ್ಷಿಕ ದಿನಾಚರಣೆ, ಬ್ರಹ್ಮಬಲಿ ಮತ್ತು ಬೈದರ್ಕಳ ನೇಮೋತ್ಸವ ಶುಕ್ರವಾರ ಜರುಗಿತು. ಗೊನೆ ಮುಹೂರ್ತ ಶುಕ್ರವಾರ ನಡೆಯಿತು.
ಪುನ:ಪ್ರತಿಷ್ಠಾ ವಾರ್ಷಿಕ ದಿನಾಚರಣೆ ಅಂಗವಾಗಿ ಗಣಪತಿ ಹೋಮ, ಕಲಶಪೂಜೆ, ಮುಡಿಪು ಶುದ್ಧಿ, ಬ್ರಹ್ಮೆರ್, ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಹಾಗೂ ಇತರ ದೈವಗಳಿಗೆ ಪೂಜೆ, ಭಜನೆ, ರಾತ್ರಿ ಗುಳಿಗ, ಕೊರತಿ ದೈವಗಳ ಕೋಲ ನಡೆಯಿತು. ಶುಕ್ರವಾರ ಬೈದರ್ಕಳ ಪ್ರದರ್ಶನ, ಬ್ರಹ್ಮ ಬಲಿ, ಬೈದರ್ಕಳ ರಂಗಸ್ಥಳ ಇಳಿಯುವುದರೊಂದಿಗೆ ರಾತ್ರಿ ಆಯುಧ ಒಪ್ಪಿಸುವಿಕೆ, ಶನಿವಾರ ಬೆಳಗ್ಗೆ 3ಕ್ಕೆ ಮಾಯಾಂದಳ ದೇವಿಯ ಪ್ರದರ್ಶನ, ಬೈದರ್ಕಳ ಸೇಟ್, ಮುಡಿಗಂಧ ಪ್ರಸಾದ ವಿತರಣೆ ನಡೆಯಿತು.

