ಜಮ್ಮು: ಕಠುವಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಮ್‌ಕೋಟೆ ವಲಯದ ಪಂಜ್‌ತೀರ್ಥಿ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಹೇಳಿವೆ.
ಮೂವರೂ ಉಗ್ರರನ್ನು ನಿಷ್ಕ್ರಿಯಗೊಳಿಸುವವರೆಗೂ ಕಾರ್ಯಾಚರಣೆ ನಡೆಯಲಿದೆ. ಶಂಕಿತರ ಸುಳಿವು ಕಂಡರೆ ಜನರೂ ಮಾಹಿತಿ ನೀಡಬೇಕು ಎಂದು ಡಿಐಜಿ ಶಿವಕುಮಾರ ಶರ್ಮಾ ತಿಳಿಸಿದ್ದಾರೆ.




