HEALTH TIPS

ಎಫ್‌ಐಐಟಿ ಜೆಇಇ: ಹಣ ದುರ್ಬಳಕೆ- ಇ.ಡಿ ಆರೋಪ

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತರಬೇತಿ ನೀಡುವ ಪ್ರತಿಷ್ಠಿತ 'ಎಫ್‌ಐಐಟ್‌ ಜೆಇಇ' ಸಂಸ್ಥೆಯು ಸಹಸ್ರಾರು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ₹ 200 ಕೋಟಿಗೂ ಹೆಚ್ಚು ಶುಲ್ಕವನ್ನು ಸಂಗ್ರಹಿಸಿ, ಅವರಿಗೆ ಸಮರ್ಪಕ ಶೈಕ್ಷಣಿಕ ಸೇವೆ ಒದಗಿಸದೆ ವಂಚಿಸಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಶನಿವಾರ ಆರೊಪಿಸಿದೆ.

ಸಂಸ್ಥೆಯು ಈ ಮೂಲಕ ಗಂಭೀರ ಆರ್ಥಿಕ ಅಕ್ರಮಗಳಲ್ಲಿ ತೊಡಗಿದ್ದು, ವಿದ್ಯಾರ್ಥಿಗಳ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ದೂರಿದೆ.

ಶೋಧ ನಡೆಸಿದ್ದ ಇ.ಡಿ:

ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಇ.ಡಿ ಏಪ್ರಿಲ್‌ 24ರಂದು 'ಎಫ್‌ಐಐಟಿ ಜೆಇಇ' ನಿರ್ದೇಶಕ ಡಿ.ಕೆ.ಗೋಯಲ್‌, ಇತರ ಕಾರ್ಯ ನಿರ್ವಾಹಕರ ಕಂಪನಿಗಳ ಕಚೇರಿಗಳ ಮೇಲೆ ಶೋಧ ನಡೆಸಿತ್ತು.

ನೋಯ್ಡಾ, ದೆಹಲಿ, ಗುರುಗ್ರಾಮದಲ್ಲಿನ ಏಳು ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ, ₹ 10 ಲಕ್ಷ ನಗದು, 4.89 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ. ಇ.ಡಿ ಆರೋಪಗಳ ಬಗ್ಗೆ 'ಎಫ್‌ಐಐಟಿ ಜೆಇಇ' ಅಥವಾ ಅದರ ಪ್ರತಿನಿಧಿಗಳು ಇಲ್ಲಿಯವರೆಗೆ ಯಾವುದೇ ಪ್ರಕ್ರಿಯೆ ನೀಡಿಲ್ಲ.

'ಗುಣಮಟ್ಟದ ಶೈಕ್ಷಣಿಕ ಸೇವೆ ನೀಡುವ ನೆಪದಲ್ಲಿ ಈ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ದೊಡ್ಡ ಪ್ರಮಾಣದ ಶುಲ್ಕ ಸಂಗ್ರಹಿಸಿದೆ. ಆದರೆ ಅದಕ್ಕೆ ತಕ್ಕಂತೆ ಶೈಕ್ಷಣಿಕ ಸೇವೆ ಒದಗಿಸದೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ವಂಚನೆ, ಕ್ರಿಮಿನಲ್‌ ನಂಬಿಕೆ ದ್ರೋಹ ಮತ್ತು ಶೈಕ್ಷಣಿಕ ದುರಾಚಾರಗಳಲ್ಲಿ ತೊಡಗಿದೆ' ಎಂದು ಇ.ಡಿ ಆರೋಪ ಮಾಡಿದೆ.

2025-26ರಿಂದ 2028-29ರ ನಡುವಿನ ನಾಲ್ಕು ಶೈಕ್ಷಣಿಕ ಅವಧಿಗಳಿಗಾಗಿ ಎಫ್‌ಐಐಟಿ ಜೆಇಇ ಒಟ್ಟು 14,411 ವಿದ್ಯಾರ್ಥಿಗಳಿಂದ ಸುಮಾರು ₹ 250.2 ಕೋಟಿ ಸಂಗ್ರಹಿಸಿದೆ ಎಂದು ಇ.ಡಿ ತಿಳಿಸಿದೆ.

'ಹೀಗೆ ಸಂಗ್ರಹಿಸಲಾದ ಮೊತ್ತವು ವೈಯಕ್ತಿಕ ಮತ್ತು ಅನಧಿಕೃತ ಬಳಕೆಗೆ ವರ್ಗವಾಗಿದೆ. ಆದರೆ ಸಂಸ್ಥೆಯ ಬೋಧನಾ ಸಿಬ್ಬಂದಿಯ ವೇತನಕ್ಕೆ ಪಾವತಿಯಾಗಿಲ್ಲ' ಎಂದು ಅದು ಹೇಳಿದೆ.

ಗಾಜಿಯಾಬಾದ್‌, ಲಖನೌ, ಮೀರಠ್‌, ನೋಯ್ಡಾ, ಭೋಪಾಲ್‌, ಗ್ವಾಲಿಯರ್‌, ಇಂದೋರ್‌, ಫರಿದಾಬಾದ್‌ ಮತ್ತು ಗುರುಗ್ರಾಮಗಳಲ್ಲಿನ ಒಟ್ಟು 32 ಕೋಚಿಂಗ್ ಕೇಂದ್ರಗಳನ್ನು ಸಂಸ್ಥೆ ಹಠಾತ್ತನೆ ಮುಚ್ಚಿತು. ಇದರಿಂದ ಸುಮಾರು 15,000 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದರು. ಪೋಷಕರಿಗೆ ಆರ್ಥಿಕ ಹೊರೆಯಾಯಿತು ಎಂದು ಇ.ಡಿ ಉಲ್ಲೇಖಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries