ಬೀಜಿಂಗ್: ಚೀನಾ ವಿಶ್ವದ ಮೊದಲ ಡ್ರೋನ್ ವಿರೋಧಿ ವ್ಯವಸ್ಥೆ ʼಬುಲೆಟ್ ಕರ್ಟನ್ʼ ಅನ್ನು ಅನಾವರಣಗೊಳಿಸಿದೆ. ಈ ಕ್ಲೋಸ್-ಇನ್ ಆಂಟಿ-ಡ್ರೋನ್ ಬ್ಯಾರೇಜ್ ವೆಪನ್ ಸಿಸ್ಟಮ್ ಬಹು ಡ್ರೋನ್‌ಗಳು ಮತ್ತು ಹೈ-ಸ್ಪೀಡ್ ಕ್ಷಿಪಣಿಗಳ ವಿರುದ್ಧ ತಡೆಗೋಡೆಯಾಗಿ ಹೋರಾಡುತ್ತದೆ ಎನ್ನಲಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಈ ಕ್ರಾಂತಿಕಾರಿ ನಾವೀನ್ಯತೆಯನ್ನು ಚೀನಾದ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಸ್ಥೆ ನೊರಿಂಕೊ ಮಾಡಿದೆ ಎಂದು ತಿಳಿದುಬಂದಿದೆ. ಈ ವ್ಯವಸ್ಥೆಯನ್ನು ಬುಲೆಟ್ ಕರ್ಟನ್ ಎಂದು ಕರೆಯಲಾಗುತ್ತದೆ. ಇದು ವಿಶಿಷ್ಟವಾದ "ಪ್ಲೇನ್-ಟು-ಪಾಯಿಂಟ್" ಪ್ರತಿಬಂಧಕ ವಿಧಾನವನ್ನು ಹೊಂದಿದೆ.
ವರದಿಯ ಪ್ರಕಾರ ಈ ರಕ್ಷಣಾ ವ್ಯವಸ್ಥೆ ಒಳಬರುವ ಗುರಿಗಳನ್ನು ಅತಿಕ್ರಮಿಸುವ ಫೈರ್‌ಪವರ್‌ನೊಂದಿಗೆ ಆವರಿಸಲು ಇದು ಸ್ಪೋಟಕಗಳ ಗೋಡೆಯನ್ನು ರಚಿಸುತ್ತದೆ. ಇದು ರಾಡಾರ್, ಆಪ್ಟಿಕಲ್ ಪತ್ತೆ ವ್ಯವಸ್ಥೆ, ಅಗ್ನಿ ನಿಯಂತ್ರಣ ವ್ಯವಸ್ಥೆ, ಸಂಯೋಜಿತ ನಿರ್ವಹಣಾ ವ್ಯವಸ್ಥೆ ಮತ್ತು ಮದ್ದುಗುಂಡುಗಳನ್ನು ಸಹ ಒಳಗೊಂಡಿದೆ.
ವ್ಯವಸ್ಥೆಯ ಮುಖ್ಯ ವಿನ್ಯಾಸಕ ಯು ಬಿನ್ ಇದರ ವಿಶೇಷತೆ ಬಗ್ಗೆ ವಿವರಿಸುತ್ತಾ, ಗುರಿಯು ಒಂದು ನೊಣ ಎಂದು ಊಹಿಸಿಕೊಳ್ಳಿ. ಸಾಂಪ್ರದಾಯಿಕ ವಾಯು ರಕ್ಷಣಾ ಪ್ರತಿಬಂಧವು ನೊಣದ ಮೇಲೆ ನಿರಂತರವಾಗಿ ಕಲ್ಲುಗಳನ್ನು ಎಸೆಯುವಂತಿದೆ. ಮತ್ತು ಈಗ ಬ್ಯಾರೇಜ್ ವ್ಯವಸ್ಥೆಯು ನೊಣ ಸ್ವಾಟರ್ ಅನ್ನು ಬೀಸುವಂತಿದೆ. ಇದು ನೊಣ ಚಲಿಸಬಹುದಾದ ಸಂಪೂರ್ಣ ಪ್ರದೇಶವನ್ನು ಆವರಿಸುತ್ತದೆ. ಸಾಂಪ್ರದಾಯಿಕ ವಾಯು ರಕ್ಷಣಾ ಶಸ್ತ್ರಾಸ್ತ್ರಗಳು ಒಂದೇ ಹಂತದಲ್ಲಿ ಮಾತ್ರ ಹೊಡೆಯುತ್ತವೆ. ಆದರೆ ನಾವು ಸ್ಯಾಚುರೇಶನ್ ದಾಳಿಯನ್ನು ಎದುರಿಸುವ ಸಾಮರ್ಥ್ಯವಿರುವ ಮೇಲಾವರಣವನ್ನು ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದರು.




