ನವದೆಹಲಿ/ರಾಯಪುರ: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಮತ್ತು ಛತ್ತೀಸಗಢ ಪೊಲೀಸರು ತೆಲಂಗಾಣ ಗಡಿಭಾಗದಲ್ಲಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮೂವರು ಮಹಿಳಾ ನಕ್ಸಲರನ್ನು ಹತರಾಗಿದ್ದಾರೆ.
ನಕ್ಸಲ್ ಹಿದ್ಮಾನನ್ನು ಬಂಧಿಸುವ ಸಲುವಾಗಿ ಕಾರ್ಯಾಚರಣೆ ನಡೆಯುತ್ತಿದ್ದು, 2025ರ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ.
ಗುರುವಾರ ಮುಂಜಾನೆ ಮೂರು ಮೃತದೇಹಗಳನ್ನು ಮತ್ತು ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಛತ್ತೀಸಗಢದ ಬಿಜಾಪುರ ಜಿಲ್ಲೆಯಿಂದ ಮುಳುಗು ಜಿಲ್ಲೆಯ ಕರೆಗುಟ್ಟ ಬೆಟ್ಟಗಳವರೆಗೆ ತೆಲಂಗಾಣ ಗಡಿಯುದ್ದಕ್ಕೂ ಸೋಮವಾರ ಆರಂಭಗೊಂಡಿರುವ ಕಾರ್ಯಾಚರಣೆ ಸುಮಾರು 60 ಗಂಟೆಗಳ ಬಳಿಕವೂ ಮುಂದುವರಿದಿದೆ. 5 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.




