ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್ ಆಫ್ ನಲ್ಲಿ (WhatsApp) ಮತ್ತೊಂದು ದೊಡ್ಡ ನವೀಕರಣ ಸದ್ಯದಲ್ಲೇ ಬರಲಿದೆ. ಈ ಹೊಸ ಅಪ್‌ಡೇಟ್ ಬಂದ ನಂತರ, ನಿಮ್ಮ ಅನುಮತಿಯಿಲ್ಲದೆ ಯಾರೂ ನೀವು ಕಳುಹಿಸಿದ ಫೋಟೋ ಅಥವಾ ವಿಡಿಯೋವನ್ನು ಅವರ ಮೊಬೈಲ್ ಫೋನ್‌ನಲ್ಲಿ ಸೇವ್ ಮಾಡಲು ಸಾಧ್ಯವಾಗುವುದಿಲ್ಲ.
wabetainfo ಪ್ರಕಾರ, ಇದು ಹೊಸ iOS ಅಪ್‌ಡೇಟ್ ಆಗಿದ್ದು, ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಕಾರ್ಯಕ್ರಮದ ಅಡಿಯಲ್ಲಿ ತರಲಾಗಿದೆ. ಇದು iOS ನಲ್ಲಿ ವಾಟ್ಸ್‌ಆಯಪ್ ನವೀಕರಣದ 25.10.10.70 ಆವೃತ್ತಿಯಾಗಿದೆ.
ಖಾಸಗಿ ವಿಚಾರದಲ್ಲಿ ಕಠಿಣವಾಗುತ್ತಿದೆ ವಾಟ್ಸ್‌ಆಯಪ್:
ವಾಟ್ಸ್‌ಆಯಪ್ ನ ಈ ಹೊಸ ವೈಶಿಷ್ಟ್ಯದೊಂದಿಗೆ, ನೀವು ಕಳುಹಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಯಾರೂ ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಬಳಕೆದಾರರು ನಿಮ್ಮ ಅನುಮತಿಯಿಲ್ಲದೆ ಚಾಟ್ ಅನ್ನು ಬೇರೆ ಯಾವುದೇ ಬಳಕೆದಾರರಿಗೆ ಫಾರ್ವರ್ಡ್ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ವಾಟ್ಸ್‌ಆಯಪ್ ನ ಈ ಸುಧಾರಿತ ಚಾಟ್ ಗೌಪ್ಯತೆ ವೈಶಿಷ್ಟ್ಯ, ನಿಮ್ಮ ಚಾಟ್ ಹೆಚ್ಚಿನ ಮಟ್ಟಿಗೆ ಖಾಸಗಿಯಾಗುತ್ತದೆ. ವಾಟ್ಸ್‌ಆಯಪ್ ನ ಈ ನವೀಕರಣವು ಪ್ರಸ್ತುತ ಟೆಸ್ಟ್ ಫ್ಲೈಟ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಪರೀಕ್ಷಿಸಿದ ನಂತರ, ಇದನ್ನು ಬಳಕೆದಾರರಿಗೆ ನೀಡಲಾಗುತ್ತದೆ.
ವಾಟ್ಸ್‌ಆಯಪ್ ನಲ್ಲಿ ಚಾಟ್ ಲಾಕ್:
ವಾಟ್ಸ್‌ಆಯಪ್ ನಲ್ಲಿ ಚಾಟ್ ಲಾಕ್ ವೈಶಿಷ್ಟ್ಯವೂ ಲಭ್ಯವಿದೆ. ಇದರೊಂದಿಗೆ ನೀವು ನಿಮ್ಮ ಚಾಟ್ ಪಟ್ಟಿಯಿಂದ ಚಾಟ್ ಅನ್ನು ಹೈಡ್ ಮಾಡಬಹುದು. ಈ ಚಾಟ್ ಅನ್ನು ಹುಡುಕಲು, ನೀವು ಸರ್ಚ್ ಲಿಸ್ಟ್ನಲ್ಲಿ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ, ಈ ಪಾಸ್‌ವರ್ಡ್ ನೀವು ನಿಮ್ಮ ಚಾಟ್ ಹೈಡ್ ಮಾಡುವಾಗ ನಮೋದಿಸಬೇಕಾಗುತ್ತದೆ, ಪಾಸ್‌ವರ್ಡ್ ಹಾಕಿದ ನಂತರವೇ ನೀವು ಹೈಡ್ ಮಾಡಿದ ಚಾಟ್ ಅನ್‌ಲಾಕ್ ಆಗುತ್ತದೆ.
ಇದರ ಜೊತೆಗೆ ವಾಟ್ಸ್‌ಆಯಪ್ ತನ್ನ ಬಳಕೆದಾರರಿಗೆ ಧ್ವನಿ ಕರೆಯನ್ನು ಸ್ವೀಕರಿಸುವ ಮೊದಲು ತಮ್ಮ ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡಲು ಅನುಮತಿಸುತ್ತದೆ. ಇದರಿಂದ ಬಳಕೆದಾರರು ಕರೆಯನ್ನು ತೆಗೆದುಕೊಳ್ಳುವ ಮೊದಲು ತಮ್ಮ ಮೈಕ್ರೊಫೋನ್ ಅನ್ನು ಆಫ್ ಮಾಡಬಹುದು ಮತ್ತು ಕರೆಯನ್ನು ಮ್ಯೂಟ್ ಮಾಡಬಹುದು. ವಿಡಿಯೋ ಕರೆ ಸ್ವೀಕರಿಸುವ ಸಮಯದಲ್ಲಿ, “ನಿಮ್ಮ ವಿಡಿಯೋವನ್ನು ಆಫ್ ಮಾಡಿ” ಆಯ್ಕೆಯನ್ನು ಕಾಣಬಹುದು. ಇದರರ್ಥ ಕಾಲ್ ವಾಯ್ಸ್ ಮೋಡ್‌ನಲ್ಲಿ ಮಾತ್ರ ಬರುತ್ತದೆ. ಇದಲ್ಲದೆ, ಇದು ವಿಡಿಯೋ ಕರೆಗಳಿಗೆ ಎಮೋಜಿ ಪ್ರತಿಕ್ರಿಯೆಗಳನ್ನು ನೀಡುವ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ.




