ಕಾಸರಗೋಡು:: ಪೆರಿಯ ಗೋಕುಲಂ ಗೋಶಾಲೆಯಲ್ಲಿ ಕಳೆದ 9 ದಿನಗಳಿಂದ ನಡೆದುಬರುತ್ತಿರುವ ಬಾಲಪ್ರಬೋಧಿನಿ ಶಿಬಿರದ ಸಮಾರೋಪ ಸಮಾರಂಭ ಗುರುವಾರ ಸಂಜೆ ಜರಗಿತು. ಪ್ರಸಿದ್ಧ ಬಾಲ ಕಲಾವಿದೆ, ವಲಯಲಿನ್ ಪ್ರತಿಭೆ ಗಂಗಾ ಶಶಿಧರನ್ ಹಾಗೂ ತಂಡದವರ ಗಂಗಾ ತರಂಗ ಸೇರಿದ ಸಹಸ್ರಾರು ಮಂದಿಯ ಮನಸೂರೆಗೊಂಡಿತು. ಕೇವಲ 11 ವರ್ಷದ ಬಾಲಕಿಯ ವಯಲಿನ್ ಫ್ಯೂಷನ್ ಕಾರ್ಯಕ್ರಮಕ್ಕೆ ಅಭಿಮಾನಿಗಳು ಕಿಕ್ಕಿರಿದು ಜನ ಸೇರಿದ್ದರು. ಸಮಾರೋಪ ಸಮಾರಂಭದಲ್ಲಿ ಮಹಾಮಂಡಲೇಶ್ವರ ಆನಂದವನಂ ಭಾರತಿ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಿತು. ಪರಂಪರ ವಿದ್ಯಾಪೀಠದ ವಿಷ್ಣುಪ್ರಸಾದ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಆವಂತಿಕ ಭಾರತಿ, ಚಿನ್ಮಯ ಮಿಶನ್‍ನ ಶಾಶ್ವತಿಕಾನಂದ ಸ್ವಾಮೀಜಿ, ಕೇರಳ ಸೆಂಟ್ರಲ್ ಯೂನಿವರ್ಸಿಟಿ ವೈಸ್‍ಚಾನ್ಸಲರ್ ಸಿದ್ದು ಅಲ್‍ಗೂರ್, ಸಿನಿಮಾ ನಟ ಸಂತೋಷ್ ಕಿಳಾಟ್ಟೂರು ಹಾಗೂ ಗಣ್ಯರು ಉಪಸ್ಥಿತರಿದ್ದರು.




.jpg)
