ಮಧುಬನಿ : 'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಕಾರಣರಾದ ಪ್ರತಿಯೊಬ್ಬ ಉಗ್ರ ಹಾಗೂ ಬೆಂಬಲಿಗರನ್ನು ಹುಡುಕಿ ಊಹೆಗೂ ಮೀರಿದ ಶಿಕ್ಷೆ ನೀಡಲಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
'ಇಂದು (ಗುರುವಾರ) ಬಿಹಾರದ ಮಣ್ಣಿನಿಂದ ನಾನು ಇಡೀ ಜಗತ್ತಿಗೆ ಹೇಳಬಯಸುತ್ತೇನೆ.
'ಇಂದು (ಗುರುವಾರ) ಬಿಹಾರದ ಮಣ್ಣಿನಿಂದ ನಾನು ಇಡೀ ಜಗತ್ತಿಗೆ ಹೇಳಬಯಸುತ್ತೇನೆ.
ಭಾರತವು ಪ್ರತಿಯೊಬ್ಬ ಉಗ್ರನನ್ನು ಪತ್ತೆ ಹಚ್ಚಿ ಹೊಡೆದುರುಳಿಸಲಿದೆ. ಭೂಮಿಯ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಹಿಡಿಯಲಾಗುವುದು' ಎಂದು ಅವರು ಹೇಳಿದ್ದಾರೆ.
'ಭಯೋತ್ಪಾದನೆಯಿಂದ ಭಾರತದ ಶಕ್ತಿ ಕುಂದುವುದಿಲ್ಲ. ಉಗ್ರರನ್ನು ಹಿಡಿದು ಶಿಕ್ಷೆ ನೀಡದೇ ಸುಮ್ಮನೆ ಬಿಡುವುದಿಲ್ಲ' ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಬಿಹಾರದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, 'ದಾಳಿಯಲ್ಲಿ ಮಡಿದವರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲಾಗುವುದು. ಈ ಸಂಕಲ್ಪದಲ್ಲಿ ಇಡೀ ದೇಶವೇ ದೃಢವಾಗಿ ನಿಂತಿದೆ' ಎಂದು ಹೇಳಿದ್ದಾರೆ.
'ಮಾನವೀಯತೆಯಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ಈ ಕಷ್ಟದ ಸಮಯದಲ್ಲಿ ನಮ್ಮನ್ನು ಬೆಂಬಲಿಸಿದ ಜಾಗತಿಕ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ತಿಳಿಸಿದ್ದಾರೆ.
ಇಡೀ ಜಗತ್ತಿಗೆ ತಮ್ಮ ಸಂದೇಶ ತಲುಪುವ ಉದ್ದೇಶದೊಂದಿಗೆ ಪ್ರಧಾನಿ ಈ ಮಾತುಗಳನ್ನು ಇಂಗ್ಲಿಷ್‌ನಲ್ಲಿ ಹೇಳಿದ್ದಾರೆ.




