ತಿರುವನಂತಪುರಂ: ಸಪ್ಲೈಕೋದಲ್ಲಿ ಸಬ್ಸಿಡಿ ಸರಕುಗಳ ಬೆಲೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಸಪ್ಲೈಕೋ ಮಳಿಗೆಗಳಲ್ಲಿ ನಿನ್ನೆಯಿಂದ (ಏಪ್ರಿಲ್ 11) ಸಬ್ಸಿಡಿ ಹೊಂದಿರುವ ವಸ್ತುಗಳಾದ ಬೇಳೆ, ಮೆಣಸು, ಹೆಸರುಬೇಳೆ, ಕಡಲೆ ಹಿಟ್ಟು ಮತ್ತು ದೊಡ್ಡ ಕಡಲೆ ಬೆಲೆಗಳು ಕಡಿಮೆಯಾಗಿವೆ. ಈ ವಸ್ತುಗಳ ಬೆಲೆ ಪ್ರತಿ ಕಿಲೋಗ್ರಾಂಗೆ 4 ರೂ.ನಿಂದ 10 ರೂ.ವರೆಗೆ ಕಡಿತವಾಗಿದೆ.
ನಿನ್ನೆಯಿಂದ (ಏಪ್ರಿಲ್ 11) ಸಪ್ಲೈಕೋ ಮಳಿಗೆಗಳಲ್ಲಿ ಜಿಎಸ್‌ಟಿ ಸೇರಿದಂತೆ ಸಬ್ಸಿಡಿ ಸರಕುಗಳ ಬೆಲೆಗಳು ಇಂತಿವೆ:
ಪ್ರತಿ ಕಿಲೋಗ್ರಾಂ ದೊಡ್ಡ ಕಡಲೆ 65 ರೂಪಾಯಿ,
ಪ್ರತಿ ಕಿಲೋಗ್ರಾಂ ಪಚ್ಚೆ ಹೆಸರು 90 ರೂಪಾಯಿ,
ಪ್ರತಿ ಕಿಲೋಗ್ರಾಂ ಇಡಿ ಹೆಸರು 75 ರೂಪಾಯಿ,
ಪ್ರತಿ ಕಿಲೋಗ್ರಾಂ ತೊಗರಿ ಬೇಳೆ 105 ರೂಪಾಯಿ, ಮೆಣಸು(500 ಗ್ರಾಂ ) 57.75 ರೂಪಾಯಿ,
ಕೊತ್ತಂಬರಿ(500 ಗ್ರಾಂ) 40.95 ರೂಪಾಯಿ.
ಸಕ್ಕರೆ (ಒಂದು ಕಿ.ಗ್ರಾಂ) 34.65 ರೂಪಾಯಿ.
ತೆಂಗಿನ ಎಣ್ಣೆ ಒಂದು ಲೀಟರ್ ಪ್ಯಾಕೆಟ್ (ಸಬ್ಸಿಡಿ 500 ಮಿಲಿ + ಸಬ್ಸಿಡಿ ರಹಿತ 500 ಮಿಲಿ) — 240.45
ಜಯ ಅಕ್ಕಿ (ಒಂದು ಕಿಲೋಗ್ರಾಂ) — 33
ಕುರುವಾ ಅಕ್ಕಿ (ಒಂದು ಕಿಲೋಗ್ರಾಂ) — 33
ಮಟ್ಟಾ ಅಕ್ಕಿ (ಒಂದು ಕಿಲೋಗ್ರಾಂ) — 33
ಕುಸುಲಕ್ಕಿ (ಒಂದು ಕಿಲೋಗ್ರಾಂ) — 29.




