ಕಾಸರಗೋಡು: ಬೋಧನಾ ಸೇವೆಯಿಂದ ನಿವೃತ್ತರಾಗುತ್ತಿರುವ ಕಾಸರಗೋಡು ಉಪಜಿಲ್ಲೆಯ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಕಾಸರಗೋಡಿನಲ್ಲಿ ಜರಗಿತು. ಕಾಸರಗೋಡು ಜಿಲ್ಲಾ ಮುಖ್ಯೋಪಾಧ್ಯಯರ ಫಾರಂ ವತಿಯಿಂದ ಬೀಳ್ಕೊಡುಗೆ ಅಯೋಜಿಸಲಾಗಿತ್ತು. ಕಾಸರಗೋಡು ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಟಿ.ವಿ.ಮಧುಸೂದನ್ ಸಮಾರಂಭ ಉದ್ಘಾಟಿಸಿದರು. ಸಭೆಯಲ್ಲಿ ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟೀನ್ ಬರ್ನಾರ್ಡ್ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು.
ಡಿ.ಪಿ.ಸಿ.ಬಿಜುರಾಜ್, ಡಿ.ಇ.ಒ. ದಿನೇಶ್ ವಿ, ಡಿಪಿಒ. ಪ್ರಕಾಶನ್, ರಂಜಿತ್, ವಿನೋದ್ ಕುಮಾರ್ ಪೆರುಂಬಳ, ರಾಘವನ್ ತೆಕ್ಕಿಲ್, ಪಿ.ಟಿ. ಬೆನ್ನಿ ಉಪಸ್ಥಿತರಿದ್ದರು. ಫಾರಂ ಸಂಚಾಲಕ ಸುನಿಲ್ ಪಲ್ಲಂ ಸ್ವಾಗತಿಸಿದರು. ಕೋಶಾಧಿಕರಿ ಗಫೂರ್ ದೇಳಿ ವಂದಿಸಿದರು. ಜಿಲ್ಲಾ ಶಿಕ್ಷಣಾಧಿಕಾರಿ ಸೇರಿದಂತೆ ಹದಿನಾಲ್ಕು ಮಂದಿ ಮುಖ್ಯ ಶಿಕ್ಷಕರಿಗೆ ಬೀಲ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.




