HEALTH TIPS

ಬೇಸಿಗೆಯಲ್ಲೂ ಪದೇ ಪದೇ ಮೂತ್ರ ಬರುತ್ತಾ? ನಿಮ್ಮ ದೇಹದಲ್ಲಿ ಶುರುವಾಗಿದೆ ಈ ಸಮಸ್ಯೆ

ಈ ಚಳಿಗಾಲ ಅಥವಾ ಮಳೆಗಾಲದಲ್ಲಿ ಪದೇ ಪದೇ ಮೂತ್ರ (urination ) ಬರುವುದು ಸಹಜ, ಆದರೆ ಬೇಸಿಗೆ ಕಾಲದಲ್ಲೂ ಪದೇ ಪದೇ ಮೂತ್ರ ಬರುತ್ತದೆ ಎಂದರೆ, ಅದು ಈ ಸಮಸ್ಯೆಯಾಗಿರುಬೇಕು. ಬೇಸಿಗೆಯಲ್ಲಿ (summer) ಬಾರಿಕೆ ಹೆಚ್ಚು, ಅಷ್ಟೇ ನಮ್ಮ ದೇಹದಿಂದ ಬೆವರು ಕೂಡ ಬರುತ್ತದೆ.

ಮೂತ್ರದ ಬದಲು ಅದು ಬೆವರಿನ ರೂಪದಲ್ಲಿ ಹೋಗುತ್ತದೆ. ಅದರೂ ನಮ್ಮ ಪದೇ ಪದೇ ಮೂತ್ರ ಬರುತ್ತದೆ ಎಂದರೆ ನಮ್ಮಲ್ಲಿ ಮೂತ್ರನಾಳದ ಸೋಂಕು, ಮೂತ್ರಪಿಂಡದ ತೊಂದರೆ, ಮೂತ್ರಕೋಶದ ತೊಂದರೆ ಮತ್ತು ನಿರ್ಜಲೀಕರಣ ಇದೆ ಎಂದರ್ಥ. ಬೇಸಿಗೆ ಕಾಲದಲ್ಲಿ ನಾವು ಹೆಚ್ಚು ನೀರು ಕುಡಿಯುವ ಕಾರಣ ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತದೆ ಎಂಬ ಅಭಿಪ್ರಾಯ ಇರಬಹುದು. ಆದರೆ, ಬೇಸಿಗೆಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಅನೇಕ ಗಂಭೀರ ಕಾಯಿಲೆಗಳನ್ನು ಸೂಚಿಸುತ್ತದೆ.

ಬೇಸಿಗೆಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದರಿಂದ ಉಂಟಾಗುವ ರೋಗಗಳು ಯಾವುವು? ಇಲ್ಲಿದೆ ನೋಡಿ.

  • ಮೂತ್ರನಾಳದ ಸೋಂಕು: ಪದೇ ಪದೇ ಮೂತ್ರ ಬರಲು ಮೂತ್ರನಾಳದ ಸೋಂಕು ಕಾರಣವಾಗಿರುತ್ತದೆ. ಈ ಸಮಸ್ಯೆಯು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಮತ್ತು ಮೂತ್ರ ವಿಸರ್ಜಿಸುವಾಗ ಉರಿ ಅನುಭವ ಕೂಡ ಆಗುತ್ತದೆ. ಇದರೊಂದಿಗೆ ಜ್ವರ ಕೂಡ ಬರಬಹುದು.
  • ಮಧುಮೇಹ:ಮಧುಮೇಹ ರೋಗಿಗಳು ಆಗಾಗ್ಗೆ ಮೂತ್ರ ಬರುತ್ತದೆ.

    ಪದೇ ಪದೇ ಈ ಕಾರಣವು ಇರಬಹುದು. ಮಧುಮೇಹದ ಆರಂಭಿಕ ಕೂಡ ಹೌದು. ಈ ರೋಗದ ಆರಂಭದಲ್ಲಿ, ಪ್ರತಿ ಅರ್ಧಗಂಟೆಗೊಮ್ಮೆ ಮೂತ್ರ ವಿಸರ್ಜಿಸುವ ಸೂಚನೆಯನ್ನು ನೀಡುತ್ತದೆ.
  • ನಿರ್ಜಲೀಕರಣ:ಬೇಸಿಗೆಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಗೆ ನಿರ್ಜಲೀಕರಣವೂ ಒಂದು ಕಾರಣವಾಗಬಹುದು. ದೇಹದಲ್ಲಿ ನೀರಿನ ಕೊರತೆಯಿಂದಾಗಿ ಮೂತ್ರವು ದಪ್ಪವಾಗುತ್ತದೆ.

    ಈ ಕಾರಣಕ್ಕೆ ಪದೇ ಪದೇ ಮೂತ್ರ ಬರಬಹುದು.
  • ಮೂತ್ರಕೋಶ ಅಥವಾ ಪ್ರಾಸ್ಟೇಟ್ ಸಮಸ್ಯೆಗಳು: ಕೆಲವೊಮ್ಮೆ ಮೂತ್ರಕೋಶವು ಅತಿಯಾಗಿ ಸಕ್ರಿಯವಾಗುತ್ತದೆ, ಇದರಿಂದಾಗಿ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಇದಲ್ಲದೆ, ಪ್ರಾಸ್ಟೇಟ್ ಗ್ರಂಥಿಯಲ್ಲಿ ಸಮಸ್ಯೆಗಳಿದ್ದರೆ. ಪ್ರಾಸ್ಟೇಟ್ ಗ್ರಂಥಿಯಲ್ಲಿ ಸಮಸ್ಯೆ ಇದ್ದರೆ, ಎಲ್ಲಾ ಮೂತ್ರವು ಒಂದೇ ಬಾರಿಗೆ ಹೊರಬರುವುದಿಲ್ಲ. ಆ ಕಾರಣದಿಂದ ಪದೇ ಪದೇ ಮೂತ್ರ ಬರುತ್ತದೆ. ಈ ಬಗ್ಗೆ ವೈದ್ಯರನ್ನು ಭೇಟಿ ಮಾಡಿ, ಸರಿಯಾದ ಚಿಕಿತ್ಸೆ ಪಡೆಯಿರಿ.
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries